I.N.D.I.A ಎಂಬ ಹೆಸರಿನಿಂದ ಬಿಜೆಪಿ ಸರ್ಕಾರ ಭಯಗೊಂಡಂತೆ ಕಾಣುತ್ತಿದೆ: ರಾಹುಲ್ ಗಾಂಧಿ

ನವದೆಹಲಿ;- ಭಾರತದಲ್ಲಿ ಅಲ್ಪಸಂಖ್ಯಾತರನ್ನು ಹತ್ತಿಕ್ಕುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ದೇಶದ ಹೆಸರನ್ನು ಬದಲಾಯಿಸಲು ಹೊರಟಿರುವವರು ಮುಂಬರುವ ದಿನಗಳಲ್ಲಿ ತಕ್ಕ ಬೆಲೆ ತೆರಬೇಕಾಗುತ್ತದೆ. ದೇಶದ ಹೆಸರನ್ನು ಬದಲಾಯಿಸಲು ಹೊರಟಿರುವವರು ಮೂಲ ಇತಿಹಾಸವನ್ನು ತಿಳಿಯಲು ನಿರಾಕರಿಸುತ್ತಿದ್ದಾರೆ.

ಈ ರೀತಿ ಹೆಸರು ಬದಲಾಯಿಸುವ ಮೂಲಕ ದೇಶದ ಮೇಲೆ ದಾಳಿ ಮಾಡಲು ಹೊರಟಿರುವವರು ಮುಂದಿನ ದಿನಗಳಲ್ಲಿ ತಕ್ಕ ಬೆಲೆ ತೆರಲಿದ್ದಾರೆ. ದೇಶವನ್ನು ಭಾರತ ಅಥವಾ ಇಂಡಿಯಾ ಎಂದು ಕರೆದರೂ ಯಾವ ತೊಂದರೆ ಇಲ್ಲ. ಆದರೆ ಹೆಸರು ಬದಲಾವಣೆ ಮಾಡಲು ಯಾಕಿಷ್ಟು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ವಿಪಕ್ಷಗಳ ಒಕ್ಕೂಟ ತಮ್ಮ ಮೈತ್ರಿಕೂಟಕ್ಕೆ I.N.D.I.A ಎಂದು ಹೆಸರಿಟ್ಟ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿರುವುದು ನನಗೆ ಆಶ್ಚರ್ಯ ಮೂಡಿಸಿದೆ.

ಭಾರತದ ಸಂವಿಧಾನವು ಎರಡು ಹೆಸರುಗಳನ್ನು ಬಳಸುತ್ತದೆ. ಎರಡು ಹೆಸರುಗಳೂ ಸರಿಯಾಗಿವೆ. ಆದರೆ, ವಿಪಕ್ಷಗಳ ಮೈತ್ರಿಕೂಟ I.N.D.I.A ಎಂಬ ಹೆಸರಿನಿಂದ ಕೇಂದ್ರ ಬಿಜೆಪಿ ಸರ್ಕಾರ ಭಯಗೊಂಡಂತೆ ಕಾಣುತ್ತಿದೆ. ಅದಕ್ಕೆ ಅವರು ದೇಶದ ಹೆಸರನ್ನು ಬದಲಾಯಿಸಲು ಹೊರಟ್ಟಿದ್ಧಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

Loading

Leave a Reply

Your email address will not be published. Required fields are marked *