ಬೆಂಗಳೂರು: ಕೊರೋನಾದಿಂದ ತತ್ತರಿಸಿದ್ದ ನೇಯ್ಗೆ ಉದ್ಯಮಕ್ಕೆ ನಮ್ಮ ಸರ್ಕಾರ ಸಬ್ಸಿಡಿ ಮತ್ತು ಸಹಕಾರ ನೀಡುವ ಮೂಲಕ ತನ್ನ ಕಾಲ ಮೇಲೆ ನಿಲ್ಲುವಂತೆ ಮಾಡಿತ್ತು.ಆದರೆ #ATMSarkara ದ ಗ್ಯಾರಂಟಿ ಪ್ರಸಾದವಾಗಿ ವಿದ್ಯುತ್ ಮಗ್ಗಗಳ ಬಿಲ್ಗಳು ನಾಲ್ಕು ಪಟ್ಟು ಹೆಚ್ಚಾಗಿದೆ. ರಾಜ್ಯಾದ್ಯಂತ 1.2 ಲಕ್ಷ ವಿದ್ಯುತ್ ಮಗ್ಗಗಳ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ಕುಟುಂಬಗಳಿಗೆ ಸಿದ್ದರಾಮಯ್ಯ ಅವರು ದೌರ್ಭಾಗ್ಯ ಒದಗಿಸಿದ್ದಾರೆ. ಕೂಡಲೇ ಮಗ್ಗಗಳ ವಿದ್ಯುತ್ ದರ ಇಳಿಸಿ, ಉದ್ಯಮ ಉಳಿಸಿ, ನೇಕಾರರಿಗೆ ಗೌರವಯುತ ಬದುಕು ಬದುಕಲು ಅವಕಾಶ ಕಲ್ಪಿಸಿ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.