ಬೆಂಗಳೂರು: ಹೆಣ್ಣೂರಿನ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಏನಪ್ಪಾ ಅಂದರೆ ಹುಡುಗಿಯ ವಿಚಾರಕ್ಕೆ ಕೊಲೆ ಮಾಡಿದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿ ಮಾರ್ವೇಶ್ ಎಂಬಾತನ ಕೊಲೆ ಮಾಡಿದ ಕಾರ್ತಿಕ್,ಅಭಿಷೇಕ್, ನೆಲ್ಸನ್ ,ರಾಕಿ,ಡಾನಿಯಲ್, ಶ್ರೀಕಾಂತ್ ಎಂಬುವರನ್ನು ಹೆಣ್ಣೂರು ಪೊಲೀಸರು ಬಂಧಿಸಿ ಸಖತ್ ಡ್ರಿಲ್ ಮಾಡಿದ್ದಾರೆ.
ಘಟನೆ ವಿವರ:
ಕೊಲೆಯಾದ ಮಾರ್ವೇಶ್ ಸ್ನೇಹಿತ ಕಾಲೇಜಿನ ಹುಡುಗಿಗೆ ಪ್ರೀತಿಸುತ್ತಿದ್ದೇನೆಂದು ಸತಾಯಿಸುತ್ತಿದ್ದ ಆದರೆ ಯುವತಿ ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದಳು ಹೀಗಾಗಿ ಯುವತಿಗೆ ಸತಾಯಿಸುತ್ತಿದ್ದ ಬಗ್ಗೆ ತನ್ನ ಬಾಯ್ ಫ್ರೆಂಡ್ ಬಗ್ಗೆ ವಿಚಾರ ತಿಳಿಸಿದ್ದ ಯುವತಿ ಆದರೆ ಯುವತಿ ಬಾಯ್ ಫ್ರೇಂಡ್ ಆರೋಪಿಯಾದ ರಾಕಿಗೆ ತಿಳಿಸಿದ್ದನು. ಹಾಗಾಗಿ ರಾಕಿ ,ಡ್ಯಾನಿಯಲ್ ಕಾಲೇಜಿ ನ ಬಳಿ ಉಪಾಯ ಮಾಡಿ ಮಾರ್ವೇಶ್ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮಾರ್ವೇಶ್ ನನ್ನು ಕಾರ್ತಿಕ್, ನೆಲ್ಸನ್, ಅಭಿಗೆ ಒಪ್ಪಿಸಿದ್ದಾರೆ.
ಆ ನಂತರ ಈ ಮೂವರು ಪಿವಿಸಿ ಪೈಪ್ ನಿಂದ ಮಾರ್ವೇಶ್ ಹಲ್ಲೆ ಮಾಡಿದ್ದಾರೆ ನಂತರ ನಿನ್ನ ಸ್ನೇಹಿತನಿಗೆ ಹೇಳು ಯುವತಿ ವಿಚಾರಕ್ಕೆ ಬರಬೇಡ ಎಂದು ಹಲ್ಲೆ ಮಾರ್ವೆಶ್ ಗೆ ಎಲ್ಲರು ಸೇರಿ ಹಲ್ಲೆ ಮಾಡಿದ್ದಾರೆ.ಹಾಗೆ ಕರೆಮಾಡಿ ಇಲ್ಲಿ ಬರಲು ಹೇಳು ಅಂತಾನೂ ಅವನಿಗರ ಟಾರ್ಚರ್ ಕೂಡ ಕೊಟ್ಟಿದ್ದರು. ಆದರೆ ಈ ವೇಳೆ ಮಾರ್ವೇಶ್ ಸ್ನೇಹಿತ ಕರೆ ಸ್ವೀಕರಿಸಿರಲಿಲ್ಲ.
ಆದರೆ ಹಲ್ಲೆ ವಿಕೋಪಕ್ಕೆ ತರಳಿದ್ದರಿಂದ ನೋವು ತಡೆಯಲಾಗದೇ ಅಲ್ಲೇ ಒದ್ದಾಡುತ್ತಿದ್ದನು ಇ ಆರೋಪಿಗಳೆಲ್ಲಾ ಎಸ್ಕೇಪ್ ಆಗಿದ್ದರು. ಅಲ್ಲೇ ಬೇರೆ ಜನ ಇವನನ್ನ ನೋಡಿ ಆಸ್ಪತ್ರೆಗೆ ಕರೆದುಕೊಂಡು ಬರುವಾಗಲೇ ಸಾವನ್ನಪ್ಪಿದ್ದನು. ಆದರೆ ಕೊಲೆ ದಿನ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಪತ್ತೆಯಾಗಿರಲಿಲ್ಲ ಈ ಹಿನ್ನೆಲೆಯಲ್ಲಿ ಪೊಲೀಸರು ಅನುಮಾನಸ್ಪಾದ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಆದರೆ ಪೋಸ್ಟ್ ಮಾರ್ಟ ಬಳಿಕ ಕೊಲೆ ಎಂದು ಸತ್ಯಾ ಗೊತ್ತಾಗಿದ್ದು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದಾಗ ಹಲ್ಲೆ ಮಾಡಿ ಕೊಲೆ ನಡೆಸಿರುವುದಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಹೆಣ್ಣೂರು ಪೊಲೀಸರಿಂದ ಮುಂದುವರೆದ ತನಿಖೆ ನಡೆಯುತ್ತಿದ್ದು ಕೊಲೆ ಮಾಡಿದ ಆರೋಪಿಗಳ ವಿರುದ್ಧ ರೌಡಿ ಪಟ್ಟ ಸಹ ಇರುವುದರಿಂದ ಪೊಲೀಸರು ಕೂಲಕಂಷವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಪ್ರತಿಕ್ರಿಯೇ ನೀಡಿ ಎರಡು ದಿನದ ಹಿಂದೆ ಮಾರ್ವೇಶ್ ಎಂಬಾತನ ಹತ್ಯೆ ಮಾಡಲಾಗಿತ್ತು.. ಪ್ರಕರಣ ಸಂಬಂಧ ಆರು ಜನರ ಬಂಧನ ಮಾಡಲಾಗಿದೆ. ಕಾರ್ತಿಕ್, ಅಭಿಷೇಕ್, ನೆಲ್ಸನ್, ರಾಕಿ, ಡ್ಯಾನಿಯಲ್, ಶ್ರೀಕಾಂತ್ ಬಂಧಿತ ಆರೋಪಿಗಳಾಗಿದ್ದು ಬಂಧಿತರೆಲ್ಲರು 20 ರಿಂದ 21 ವರ್ಷದವರು ಆಗಿದ್ದಾರೆ.
ಇದರಲ್ಲಿ ಕಾರ್ತಿಕ್, ಅಭಿಷೇಕ್ ಹಾಗೂ ನೆಲ್ಸನ್ ಕಾಲೇಜು ಡ್ರಾಪೌಟ್ ಆದ ಯುವಕರು ಜೊತೆಗೆ ಈ ಮೂವರ ವಿರುದ್ಧ ಅಪರಾಧ ಪ್ರಕರಣಗಳು ಸಹ ಇವೆ. ಕಾರ್ತಿಕ್ ವಿರುದ್ಧ ರಾಮಮೂರ್ತಿನಗರದಲ್ಲಿ ರೌಡಿ ಪಟ್ಟಿ ಸಹ ಇದೆ..
ಆತನ ವಿರುದ್ಧ ಚುನಾವಣೆ ಸಂದರ್ಭದಲ್ಲಿ ಬಾಂಡ್ ಸಹ ಬರೆಸಿಕೊಳ್ಳಲಾಗಿತ್ತು.. ಈ ಕೊಲೆಯಲ್ಲಿ ಭಾಗಿಯಾದ ಅಭಿ, ನೆಲ್ಸನ್ ವಿರುದ್ಧ ಮುಂದಿನ ದಿನಗಳಲ್ಲಿ ರೌಡಿಪಟ್ಟಿ ಓಪನ್ ಮಾಡಲಾಗುವುದು ಎಂದು ತಿಳಿಸಿದರು.