ಚೀನಾಕ್ಕೆ ಭಾರೀ ಆಘಾತ: ಒನ್ ಬೆಲ್ಟ್’ನಿಂದ ಹೊರಬಿದ್ದ ಇಟಲಿ

ರೋಮ್‌: ಚೀನಾಗೆ ಇಟಲಿ ಬಿಗ್‌ ಶಾಕ್‌ ನೀಡಿದೆ. ಚೀನಾದ (China) ಮಹತ್ವಾಕಾಂಕ್ಷೆಯ ಬೆಲ್ಟ್‌ ಅಂಡ್‌ ರೋಡ್‌ ಇನಿಷಿಯೇಟಿವ್ (BRI) ಯೋಜನೆಯಿಂದ ಹೊರಬರುವುದಾಗಿ ಇಟಲಿ (Italy) ಅಧಿಕೃತವಾಗಿ ತಿಳಿಸಿದೆ. ಈಗ ಇಟಲಿ ಅಧಿಕೃತವಾಗಿ ಈ ಯೋಜನೆಯಿಂದ ಹೊರಬರುವುದಾಗಿ ಚೀನಾಗೆ ತಿಳಿಸಿದೆ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

2019ರಲ್ಲಿ ನಡೆದ ಒಪ್ಪಂದವು ಮಾರ್ಚ್ 2024 ರಲ್ಲಿ ಮುಕ್ತಾಯಗೊಳ್ಳುತ್ತದೆ. ರೋಮ್ ಕನಿಷ್ಠ ಮೂರು ತಿಂಗಳ ಮೊದಲೇ ಲಿಖಿತವಾಗಿ ತಿಳಿಸದೇ ಇದ್ದರೆ ಅದು ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತದೆ. ಈಗ ಈ ಒಪ್ಪಂದವನ್ನು ನವೀಕರಿಸುವುದಿಲ್ಲಎಂದು ಇಟಲಿ ಚೀನಾಗೆ ಇತ್ತೀಚಿಗೆ ಪತ್ರದ ಮೂಲಕ ತಿಳಿಸಿದೆ ಎಂದು ವರದಿಯಾಗಿದೆ.

ಚೀನಾದ ಈ ಯೋಜನೆಗೆ 2019ರಲ್ಲಿ ಇಟಲಿ ಸಹಿ ಹಾಕಿತ್ತು. ಬಿಆರ್‌ಐ ಸೇರಿದ ಏಕೈಕ ಪಾಶ್ಚಿಮಾತ್ಯ ದೇಶ ಇಟಲಿಯಾಗಿತ್ತು. ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಇಟಲಿ ಈ ಯೋಜನೆಯಿಂದ ಹಿಂದಕ್ಕೆ ಸರಿಯಲಿದೆ ಎಂಬ ವಿಚಾರ ಕೆಲ ತಿಂಗಳಿಂದ ಸುದ್ದಿಯಾಗುತ್ತಿತ್ತು.

ನಾವು ಇನ್ನು ಮುಂದೆ ಬಿಆರ್‌ಐ ಭಾಗವಾಗಿರದಿದ್ದರೂ ಸಹ ಚೀನಾದೊಂದಿಗೆ ಅತ್ಯುತ್ತಮ ಸಂಬಂಧವನ್ನು ಕಾಪಾಡಿಕೊಳ್ಳುವ ಎಲ್ಲಾ ಉದ್ದೇಶವನ್ನು ನಾವು ಹೊಂದಿದ್ದೇವೆ. ಇತರ ಜಿ7 ರಾಷ್ಟ್ರಗಳು ಚೀನಾದೊಂದಿಗೆ ನಮಗಿಂತಲೂ ಉತ್ತಮ ಸಂಬಂಧವನ್ನು ಹೊಂದಿದ್ದರೂ ಆ ದೇಶಗಳು ಬಿಆರ್‌ಐ ಯೋಜನೆಯ ಭಾಗವಾಗಿಲ್ಲ ಎಂದು ಇಟಲಿಯ ಸರ್ಕಾರಿ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷ ಪ್ರಧಾನಿಯಾಗಿ ಜಾರ್ಜಿಯಾ ಮೆಲೋನಿ (Giorgia Meloni) ಅಧಿಕಾರ ವಹಿಸಿಕೊಂಡ ಬಳಿಕ ಚೀನಾವನ್ನು ಪಶ್ಚಿಮಕ್ಕೆ ಸಂಪರ್ಕಿಸುವ ಈ ಯೋಜನೆಯಿಂದ ಇಟಲಿಗೆ ಯಾವುದೇ ಗಮನಾರ್ಹ ಲಾಭ ಇಲ್ಲ. ಈ ಒಪ್ಪಂದದಿಂದ ಹಿಂದೆ ಸರಿಯಲು ಬಯಸುವುದಾಗಿ ಹೇಳಿದ್ದರು.

Loading

Leave a Reply

Your email address will not be published. Required fields are marked *