ಲೋಕಸಭೆಗೂ ಮುನ್ನ ಕಾಂಗ್ರೆಸ್’ಗೆ ಬಿಗ್ ಶಾಕ್: ಗುಜರಾತ್ ಶಾಸಕ ರಾಜೀನಾಮೆ

ಗಾಂಧೀನಗರ: ರಾಮಮಂದಿರ ವಿಚಾರದಲ್ಲಿ ಕಾಂಗ್ರೆಸ್‌ನ ನಿಲುವಿನಿಂದ ಅಸಮಾಧಾನಗೊಂಡು ಗುಜರಾತ್‌ನ ಕಾಂಗ್ರೆಸ್ ಶಾಸಕ ಸಿ.ಜೆ ಚಾವ್ಡಾ (CJ Chavda) ರಾಜೀನಾಮೆ ನೀಡಿದ್ದಾರೆ. ಗುಜರಾತ್‌ನ ಹಿರಿಯ ಕಾಂಗ್ರೆಸ್ ಶಾಸಕರಾದ ಸಿಜೆ ಚಾವ್ಡಾ ವಿಜಾಪುರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ರಾಮಮಂದಿರ ವಿಷಯದಲ್ಲಿ ನಮ್ಮ ಪಕ್ಷದ (ಕಾಂಗ್ರೆಸ್) ಧೋರಣೆಯಿಂದ ಅಸಮಾಧಾನವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಸ್ಪೀಕರ್ ಶಂಕರ್ ಚೌಧರಿ ಅವರಿಗೆ ಗಾಂಧೀನಗರದಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ.

ರಾಜೀನಾಮೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೂ ನಾನು ರಾಜೀನಾಮೆ ನೀಡಿದ್ದೇನೆ. ಸುಮಾರು 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಇಡೀ ದೇಶವೇ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಗೆ ಎದುರು ನೋಡುತ್ತಿದೆ. ಅದರಿಂದಾಗಿ ದೇಶದ ಜನರು ಬಹಳ ಸಂತೋಷದಿಂದ ಇದ್ದಾರೆ. ಆ ಸಂತೋಷದಲ್ಲಿ ಭಾಗವಹಿಸುವ ಬದಲು, ಕಾಂಗ್ರೆಸ್ ಪಕ್ಷ ನಡೆದುಕೊಳ್ಳುತ್ತಿರುವ ರೀತಿಯೇ ನನ್ನ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Loading

Leave a Reply

Your email address will not be published. Required fields are marked *