ಪಾವಗಡದಲ್ಲಿ ಆತ್ಮಹತ್ಯೆ ಮಾಡಿಕೊಂಡ BESCOM ಎಂಜಿನಿಯರ್

ತುಮಕೂರು: ಪಾವಗಡ ಪಟ್ಟಣದ ಖಾಸಗಿ ವಸತಿ ನಿಲಯದ ಕೊಠಡಿಯಲ್ಲಿ ಬುಧವಾರ ರಾತ್ರಿ ಬೆಳ್ಳಂದೂರಿನ ಬೆಸ್ಕಾಂ (BESCOM) ಪೂರ್ವ ವಿಭಾಗದ ಸಹಾಯಕ ಕಿರಿಯ ಎಂಜಿನಿಯರ್ ಎಸ್ ಮಂಜುನಾಥ್ (22) ಆತ್ಮಹತ್ಯೆ  ಮಾಡಿಕೊಂಡಿದ್ದಾರೆ.
ಬೆಂಗಳೂರಿನಿಂದ ಪಟ್ಟಣಕ್ಕೆ ಬಂದಿದ್ದ ಮಂಜುನಾಥ್ ವೈಎನ್ ಹೊಸಕೋಟೆಗೆ ಹೋಗಲು ಬಸ್ ಇಲ್ಲ ಎಂದು ತಿಳಿಸಿ ರಾತ್ರಿ ಪಟ್ಟಣದ ಖಾಸಗಿ ವಸತಿ ಗೃಹದಲ್ಲಿ ಕೊಠಡಿ ಪಡೆದಿದ್ದರು. ಬೆಳಗ್ಗೆ 8 ಗಂಟೆಯಾದರೂ ಕೊಠಡಿಯಿಂದ ಹೊರಬಾರದಿರುವುದರಿಂದ ಅನುಮಾನಗೊಂಡ ವಸತಿ ಗೃಹದ ಸಿಬ್ಬಂದಿ ಕಿಟಕಿಯಿಂದ ನೋಡಿದಾಗ ಫ್ಯಾನ್ಗೆ ನೇಣು ಹಾಕಿಕೊಂಡಿರುವುದು ತಿಳಿದುಬಂದಿದೆ.
ಮದುವೆ ವಿಚಾರದಲ್ಲಿ ಬೇಸರಗೊಂಡು ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೃತನ ಅಣ್ಣ ಪಟ್ಟಣದ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Loading

Leave a Reply

Your email address will not be published. Required fields are marked *