ಗರ್ಭಾವಸ್ಥೆಯಲ್ಲಿ ಎದೆಯುರಿ ಒಂದು ಸಾಮಾನ್ಯ ಸಮಸ್ಯೆ. ಹೆಚ್ಚಾಗಿ ನೀರು ಕುಡಿದ ನಂತರ ಇದು ಸಂಭವಿಸುತ್ತೆ. ಇದಲ್ಲದೆ, ಹಾರ್ಮೋನುಗಳ ಬದಲಾವಣೆಗಳಿಂದಾಗಿ, ಎದೆಯಲ್ಲಿ ಉರಿ ಸಮಸ್ಯೆ ಕಂಡು ಬರಬಹುದು. ತಜ್ಞರ ಪ್ರಕಾರ, ಒಂದು ವೇಳೆ ನೀವು ಗರ್ಭವತಿಯಾಗಿದ್ದು ಧೂಮಪಾನಿಯೂ ಆಗಿದ್ದರೆ ಕೆಲವು ಸುರಕ್ಷತಾ ವಿಧಾನಗಳನ್ನು ನೀವು ಅನಿವಾರ್ಯವಾಗಿ ಅನುಸರಿಸಲೇಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಧೂಮಪಾನ ನಿಮ್ಮ ಗರ್ಭದಲ್ಲಿರುವ ಕಂದನ ಆರೋಗ್ಯಕ್ಕೆ ಅತಿ ಹೆಚ್ಚು ಹಾನಿಯುಂಟುಮಾಡಬಹುದು.
ಗರ್ಭವತಿ ಸೇವಿಸುವ ಅಹಾರ, ಪಾನೀಯಗಳು, ಔಷಧಿಗಳು ಮೊದಲಾದವು ಗರ್ಭದಲ್ಲಿರುವ ಕಂದನ ಆರೋಗ್ಯದ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮಗಳನ್ನುಂಟುಮಾಡಬಹುದು. ಉದಾಹರಣೆಗೆ ಒಂದು ವೇಳೆ ಗರ್ಭವತಿ ವೈದ್ಯರು ಸೂಚಿಸಿದ ಆಹಾರವನ್ನು ಸಂತುಲಿತ ಪ್ರಮಾಣದಲ್ಲಿ ಸೇವಿಸಿದಾಗ ಮತ್ತು ವೈದ್ಯರು ಬೇಡವೆಂದ ಯಾವುದೇ ಆಹಾರ, ಔಷಧ ಅಥವಾ ವ್ಯಸನಗಳನ್ನು ಸ್ವೀಕರಿಸದೇ ಇದ್ದಾಗ ಕಂದನ ಆರೋಗ್ಯವೂ ಉತ್ತಮವಾಗಿರುತ್ತದೆ.
ಆದರೆ ಗರ್ಭವತಿ ತನ್ನ ಆಲಸಿ ಮತ್ತು ಅನಾರೋಗ್ಯಕರ ಜೀವನಕ್ರಮವನ್ನು ಗರ್ಭವತಿಯಾದ ಬಳಿಕವೂ ಬದಲಿಸಿಕೊಳ್ಳದೇ ಧೂಮಪಾನದಂತಹ ಕೆಟ್ಟ ಚಟಗಳನ್ನು ಮುಂದುವರೆಸಿದರೆ ಮಾತ್ರ ಮಗುವಿನ ಆರೋಗ್ಯ ಬಾಧೆಗೊಳಗಾಗುವುದು ಖಚಿತ. ಈ ವಿಷಯವನ್ನು ವಿಜ್ಞಾನವೇ ಪುರಸ್ಕರಿಸಿದೆ. ಆದ್ದರಿಂದ ಬರಲಿರುವ ಪುಟ್ಟ ಕಂದನ ಆರೋಗ್ಯಕ್ಕಾಗಿಯಾದರೂ ನೀವು ಈ ಕೆಟ್ಟ ಚಟವನ್ನು ಬಿಡಲೇಬೇಕು. ಇದರಿಂದ ನಿಮಗೆ ತೊಂದರೆಯಾದರೂ ಸಹಾ!
ಒಂದು ವೇಳೆ ನೀವು ಹಠ ಹಿಡಿದು ಧೂಮಪಾನವನ್ನು ಮುಂದುವರೆಸಿದರೆ ನಿಮ್ಮ ಕಂದನ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮವುಂಟಾಗುತ್ತದೆ ಎಂಬ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ನಿಮಗೆ ಮಾನಸಿಕವಾಗಿ ದೃಢನಿಶ್ಚಯ ತಾಳಲು ನೆರವಾಗುತ್ತದೆ…
ನಿಮ್ಮ ಧೂಮಪಾನದಿಂದ ಏನಾಗುತ್ತದೆ?
ಧೂಮಪಾನದಿಂದ ಮೊತ್ತ ಮೊದಲನೆಯದಾಗಿ ಶ್ವಾಸಕೋಶಗಳ ಮೇಲೆ ದುಷ್ಟರಿಣಾಮವುಂಟಾಗುತ್ತದೆ. ರಕ್ತದಲ್ಲಿ ನಿಕೋಟಿನ್ ಬೆರೆಯುವ ಮೂಲಕ ಹತ್ತು ಹಲವು ತೊಂದರೆಗಳು ಎದುರಾಗುತ್ತವೆ. ಇವು ಇತರರಿಗೆ ಎಷ್ಟು ಹಾನಿಕಾರವೋ ಅದಕ್ಕಿಂತಲೂ ಹೆಚ್ಚು ಗರ್ಭವತಿಗೆ ಹಾನಿಕಾರಕವಾಗಿದೆ.
ಧೂಮಪಾನದ ಹೊಗೆಯಲ್ಲಿ ಏನೇನಿದೆ?
ಈ ಹೊಗೆಯಲ್ಲಿ ಪ್ರಮುಖವಾಗಿ ವಿಷಕಾರಕವಾದ ಟಾರಿನಂತಹ ಗಾಢವಾದ ದ್ರವ ನಿಕೋಟಿನ್ ಇದೆ. ಹೆಚ್ಚೂ ಕಡಿಮೆ ಬೆಲ್ಲದ ನೀರಿನಷ್ಟು ಗಾಢವಾಗಿರುವ ಈ ದ್ರವ ರಕ್ತನಾಳಗಳ ಒಳಗೆ ಸುಲಭವಾಗಿ ಅಂಟಿಕೊಳ್ಳುತ್ತದೆ. ಶ್ವಾಸನಾಳಗಳ ಒಳಭಾಗದಲ್ಲಿಯೂ ಅಂಟಿಕೊಂಡು ಗಟ್ಟಿಯಾಗಿಬಿಡುತ್ತದೆ.
ಧೂಮಪಾನ ಮತ್ತು ಮಗುವಿನ ಮೂತ್ರಪಿಂಡಗಳ ವೈಫಲ್ಯ
ಇತ್ತೀಚಿನ ಒಂದು ಸಂಶೋಧನೆಯಲ್ಲಿ ಕಂಡುಬಂದಿರುವಂತೆ ಗರ್ಭಾವಸ್ಥೆಯಲ್ಲಿ ಮಹಿಳೆ ಅತಿ ಹೆಚ್ಚಾಗಿ ಧೂಮಪಾನ ಮಾಡಿದರೆ ಇವರ ಗರ್ಭದಲ್ಲಿರುವ ಮಗುವಿನ ಮೂತ್ರಪಿಂಡಗಳಲ್ಲಿ ತೊಂದರೆ ಕಂಡುಬಂದಿರುತ್ತದೆ.