ತೆರಿಗೆ ಪಾವತಿಸದ ಮಂತ್ರಿ ಮಾಲ್ ಗೆ ಮತ್ತೆ ಬೀಗಜಡಿದ ಬಿಬಿಎಂಪಿ

ಬೆಂಗಳೂರು:- ತೆರಿಗೆ ಪಾವತಿಸದ ನಗರದ ಪ್ರತಿಷ್ಠಿತ ‘ಮಂತ್ರಿ ಮಾಲ್’ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಈ ಮೂಲಕ ತೆರಿಗೆ ಪಾವತಿಸದ ಬಾಕಿದಾರರ ವಿರುದ್ಧ ಬಿಬಿಎಂಪಿ ಕಠಿಣ ಕ್ರಮವನ್ನು ಮುಂದುವರಿಸಿದೆ. ಮಾಲ್ ಒಳಗಿದ್ದ ಸುಮಾರು 200 ಅಂಗಡಿಗಳನ್ನು ಸಹ ಬಂದ್ ಮಾಡಲಾಗಿದೆ. ಸುಮಾರು ತಿಂಗಳುಗಳಿಂದ ಮಂತ್ರಿ ಮಾಲ್ ತೆರಿಗೆ ಪಾವತಿ ಮಾಡಿರಲಿಲ್ಲ. ಒಟ್ಟು ಸುಮಾರು 51 ಕೋಟಿ ತೆರಿಗೆ ಹಣವನ್ನು ಮಂತ್ರಿ ಮಾಲ್ ನಿಂದ ಬಿಬಿಎಂಪಿಗೆ ತೆರಿಗೆ ಪಾವತಿ ಆಗಿರಲಿಲ್ಲ.

ಈ ನಿಮಿತ್ತ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್‌ಗೆ ಹಲವು ಭಾರಿ ನೋಟಿಸ್ ನೀಡಿದ್ದರು. ಇದರೊಂದಿಗೆ ಮಂತ್ರಿ ಒಳಗಿನ ಎಲ್ಲ ಮಳಿಗೆಗಳಿಗೆ ಬಿಬಿಎಂಪಿಯಿಂದ ನೋಟಿಸ್ ಜಾರಿ ಆಗಿತ್ತು. ಆದರೆ ಈ ಮಳಿಗೆಗಳಾಗಲಿ, ಇಲ್ಲವೇ ಮಂತ್ರಿ ಮಾಲ್ ಮಾಲೀಕರಾಗಿ ನೋಟಿಸ್‌ಗೆ ಉತ್ತರ ಕೊಡದೇ ನಿರ್ಲಕ್ಷಿಸಿದ್ದರು. ಅಲ್ಲದೇ ತೆರಿಗೆಯನ್ನು ಕಾಲ ಕಾಲಕ್ಕೆ ಕಟ್ಟಿರಲಿಲ್ಲ. ಬಿಬಿಎಂಪಿ: ವಾಣಿಜ್ಯ ಮಳಿಗೆಗಳಲ್ಲಿ ಶೇ.60 ಕನ್ನಡ ಕಡ್ಡಾಯಗೊಳಿಸಲು ಶಿಸ್ತು ಕ್ರಮ, ಗಡುವು ಸಾರ್ವಜನಿಕರನ್ನು ಹೊರಕ್ಕೆ ಕಳಿಸಿ ಮಾಲ್ ಸೀಜ್ ಹೀಗಾಗಿ ಬುಧವಾರ ಬಿಬಿಎಂಪಿ ಅಧಿಕಾರಿಗಳು, ಮಾರ್ಷಲ್‌ಗಳು ಮಂತ್ರಿ ಮಾಲ್‌ಗೆ ಭೇಟಿ ನೀಡಿದರು.

ಒಳಗಿದ್ದ ಸಾರ್ವಜನಿಕರೆಲ್ಲರನ್ನು ಹೊರಗೆ ಕಳುಹಿಸಿದರು. ನಂತರ ಮಾಲ್‌ನ ಪ್ರವೇಶ ದ್ವಾರವನ್ನು ಸೀಜ್ ಮಾಡಿದರು. ಇದರೊಂದಿಗೆ ಒಳಗಿದ್ದ ಎಲ್ಲ ಮಳಿಗೆಗಳನ್ನು ಸೀಲ್ ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿರುವ ಮಾಲ್ ಮಾಲೀಕರಾದ ಬಾಕಿ ಬಿಲ್ ಫಾವತಿ ಕುರಿತು ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಈ ಮಧ್ಯೆ ಬಿಬಿಎಂಪಿ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿಸುವುದು ಸರಿಯಲ್ಲ. ಅಧಿಕಾರಿಗಳು ಯಾವುದೇ ಮಾಹಿತಿ ನೀಡದೇ ಹೀಗೆ ಮಾಡಿದ್ದಾರೆ ಎಂದು ಮಂತ್ರಿ ಮಾಲ್ ಮಾಲೀಕರು ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದು ಬಂದಿದೆ. ತೆರಿಗೆ ಕಟ್ಟದ 500 ಆಸ್ತಿಗಳಿಗೆ ಬೀಗ ಇತ್ತೀಚೆಗೆ ಆರ್‌ ಆರ್ ನಗರದಲ್ಲಿ ಸಹ ಬಹುಕಾಲದಿಂದಲೂ ತೆರಿಗೆ ಪಾವತಿಸದೇ ನಡೆಸುತ್ತಿದ್ದ ವಾಣಿಜ್ಯ ಕಟ್ಟಡಗಳು, ಆಸ್ತಿಗಳ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ಸಮರ ಸಾರಿದ್ದರು. ಅನೇಕ ಅಂಗಡಿಗಳನ್ನು ಸೀಜ್ ಮಾಡಿದ್ದರು. ನೋಟಿಸ್ ನೀಡಿದ್ದರೂ ಪ್ರತಿಕ್ರಿಯಿಸಿದ ಅಂಗಡಿಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿತ್ತು. ಇದೀಗ ಅದೇ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಮಂತ್ರಿ ಮಾಲ್‌ಗೆ ಬಿಬಿಎಂಪಿ ಬೀಗ ಬಿದ್ದಿದೆ

Loading

Leave a Reply

Your email address will not be published. Required fields are marked *