‘ಬಿಗ್ ಬಾಸ್ ಸೀಸನ್ 10’ ಈ ಹಿಂದಿನ ಎಲ್ಲಾ ಸೀಸನ್ಗಳ ರೆಕಾರ್ಡ್ ಬ್ರೇಕ್ ಮಾಡಿ ಸದ್ದು ಮಾಡಿರುವಂತಹ ಸೀಸನ್. ಕಾಂಟ್ರವರ್ಸಿ, ಟ್ರೋಲ್, ಟೀಕೆ ಹೀಗೆ ಹಲವು ವಿಚಾರಗಳಿಂದ ಈ ಬಾರಿಯ ಕನ್ನಡದ ಬಿಗ್ ಬಾಸ್ ಸದ್ದು ಮಾಡುತ್ತಿದೆ. ಶನಿವಾರ ಫಿನಾಲೆಯ ಮೊದಲ ಸಂಚಿಕೆ ಪ್ರಸಾರ ಆಗಿದೆ. ಇಂದು (ಜನವರಿ 28) ಅಂತಿಮ ಫಲಿತಾಂಶ ಹೊರಬೀಳಲಿದೆ. ಶನಿವಾರದ ಎಪಿಸೋಡ್ನಲ್ಲಿ ತುಕಾಲಿ ಸಂತೋಷ್ ಔಟ್ ಆದರು. ಅವರ ಎಲಿಮಿನೇಷನ್ ಬಳಿಕ ಉಳಿದಿರುವ ಟಾಪ್ 5 ಸ್ಪರ್ಧಿಗಳಿಗೆ ಈಗ ಢವಢವ ಶುರುವಾಗಿದೆ.
ವಿನಯ್ ಗೌಡ (Vinay Gowda), ವರ್ತೂರು ಸಂತೋಷ್, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್ ಹಾಗೂ ಡ್ರೋನ್ ಪ್ರತಾಪ್ ಅವರು ಫಿನಾಲೆಯಲ್ಲಿದ್ದಾರೆ. ಈ 5 ಸ್ಪರ್ಧಿಗಳಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದೇ ಸದ್ಯದ ಪ್ರಶ್ನೆಯಾಗಿದೆ. 5 ಜನ ಸ್ಪರ್ಧಿಗಳು ಸ್ಟ್ರಾಂಗ್ ಇದ್ದಾರೆ. ಮೈಂಡ್ ಗೇಮ್, ಜನ ಬಲ, ಟಾಸ್ಕ್ ಅಂತ ಬಂದಾಗ ಠಕ್ಕರ್ ಕೊಡುವ ಗುಣ ಎಲ್ಲವೂ ಇದೆ. ಹೀಗಿರುವಾಗ ಯಾರಿಗೆ ಗೆಲುವಿನ ಲಕ್ಷ್ಮಿ ಒಲಿಯುತ್ತಾಳೆ ಎಂಬುದು ಅಭಿಮಾನಿಗಳ ಯಕ್ಷ ಪ್ರಶ್ನೆಯಾಗಿದೆ.
ಈ ಸೀಸನ್ನಲ್ಲಿರೋ ಎಕೈಕ ಮಹಿಳಾ ಸ್ಪರ್ಧಿ ಎಂದರೆ ಅದು ಸಂಗೀತಾ ಶೃಂಗೇರಿ. ಮೊದಲ ದಿನದಿಂದಲೂ ಟಫ್ ಫೈಟ್ ನೀಡುತ್ತಲೇ ಬಂದಿದ್ದಾರೆ. ವಿನಯ್, ಕಾರ್ತಿಕ್ ಏನು ಕಮ್ಮಿಯಿಲ್ಲ. ಎದುರಾಳಿಗಳಿಗೆ ಠಕ್ಕರ್ ಕೊಟ್ಟು ಬರುವ ಸ್ಪರ್ಧಿಗಳು. ವರ್ತೂರು ಸಂತೋಷ್, ಪ್ರತಾಪ್ ಸೈಲೆಂಟ್ ಆಗಿದ್ರು ಕೂಡ ಸಮಯ ಬಂದಾಗ ವೈಲೆಂಟ್ ಆಗಿ ಆಟ ಆಡಿದ್ದು ಇದೆ. ಹಾಗಾಗಿ ವಿನ್ನರ್ ಘೋಷಣೆಗೆ ಬಿಗ್ ಬಾಸ್ ಫಿನಾಲೆ ಎಪಿಸೋಡ್ ಪ್ರಸಾರ ಆಗುವವರೆಗೂ ಕಾಯಬೇಕಿದೆ.