ಬೆಂಗಳೂರು: ಸಿದ್ದರಾಮಯ್ಯ ಒಬ್ಬ ಗೋ ಮುಖ ವ್ಯಾಘ್ರ. ಬಿಜೆಪಿಯ ಹೋರಾಟ ನ್ಯಾಯಯುತ ಹೋರಾಟ ಇತ್ತು. ಡೆಪ್ಯುಟಿ ಸ್ಪೀಕರ್ ಅಂತಾ ದಲಿತರ ಮೇಲೆ ಪ್ರೀತಿ ತೋರಿಸುವ ಸಿದ್ದರಾಮಯ್ಯ ನವರೇ ದಲಿತರ ಸಮಾಧಿ ಮೇಲೆ ಕುಳಿತಿರೋದು ನೀವೇ ತಾನೇ? ನೀವು ಸಿಎಂ ಆಗಿ ಕುಳಿತಿರೋದು ನಿಮ್ಮ ಜಾಗದಲ್ಲಿ ಅಲ್ಲ, ದಲಿತರ ಸ್ಥಾನದಲ್ಲಿ. ನಿಮಗೆ ತಾಕತ್ ಇದ್ರೆ ಘೋಷಣೆ ಮಾಡಿ. ನೀವು ಅನುಭವಿಸಿರುವ ಎಲ್ಲಾ ಅಧಿಕಾರ ದಲಿತರಿಗೆ ಸೇರಬೇಕಿದ್ದದ್ದು ದಲಿತರಿಗೆ ಸಿಎಂ ಆಗಲು ಅವಕಾಶ ಬಂದಾಗ ನಾನು ದಲಿತ ಅಂದ್ರಲ್ಲಾ, ನಿಮಗೆ ನಾಚಿಕೆ ಆಗಲ್ವಾ? ನಿಮಗೆ ಸ್ವಲ್ಪ ದಲಿತ ಕಾಳಜಿ ಇದ್ರೆ ಇವತ್ತು ರಾಜೀನಾಮೆ ನೀಡಿ. ದಲಿತರಿಗೆ ಸಿಎಂ ಸ್ಥಾನ ಬಿಟ್ಟು ಕೊಡಿ. ಇಲ್ಲವಾದಲ್ಲಿ ನೀವು ಒಬ್ಬ ಗೋಮುಖ ವ್ಯಾಘ್ರ. ಸಿದ್ದರಾಮಯ್ಯ ಮೇಲೆ ಮಾತ್ರ ಬಸಪ್ಪ, ಆದರೆ ಒಳಗೆ ಮಾತ್ರ ವಿಷಪ್ಪ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.