ಬೆಂಗಳೂರು: ತಾಯಿ ಜೊತೆ ಸಲುಗೆಯಿಂದ ಮಾತನಾಡುತ್ತಾನೆ ಎಂದು ಮಗನೇ ಅಡುಗೆ ಭಟ್ಟನನ್ನ ಕೊಂದಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ.
44 ವರ್ಷದ ರವಿ ಭಂಡಾರಿ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.ಮೃತ ವ್ಯಕ್ತಿ ರಾಜಾಜಿನಗರದ ಪಿಜಿಯಲ್ಲಿ ಅಡುಗೆ ಭಟ್ಟನಾಗಿದ್ದ. ಅಡುಗೆ ಸಹಾಯಕಿಯಾಗಿದ್ದ ಪದ್ಮಾವತಿ ಮನೆಯಲ್ಲಿ ಕೊಲೆ ನಡೆದಿದೆ.
ರಾಜಾಜಿನಗರದ 6 ನೇ ಬ್ಲಾಕ್ ನಲ್ಲಿ ಘಟನೆ ಜರುಗಿದೆ.
ಪದ್ಮಾವತಿ ಮಗ ರಾಹುಲ್ ಚಾಕುವಿನಿಂದ ಇರಿದು ರವಿ ಭಂಡಾರಿ ಹತ್ಯೆ ಮಾಡಿದ್ದಾನೆ.
ತಾಯಿ ಜೊತೆ ಅನ್ಯೋನ್ಯವಾಗಿ ಮಾತಾಡ್ತಾನೆಂದು ಕೋಪಗೊಂಡು ಹತ್ಯೆ ಮಾಡಿರುವುದು ತಿಳಿದು ಬಂದಿದೆ. ನೆನ್ನೆ ಮೃತ ರವಿಭಂಡಾರಿಗೆ ಕರೆ ಮಾಡಿ ಮಾತಾಡಬೇಕೆಂದು ಮನೆಗೆ ಆರೋಪಿ ರಾಹುಲ್ ಕರೆಸಿಕೊಂಡಿದ್ದ. ಈ ವೇಳೆ ಈ ಕೃತ್ಯ ಎಸಗಿದ್ದಾರೆ.
ಕೊಲೆ ನಡೆದ ವೇಳೆ ಆರೋಪಿ ತಾಯಿ ಪದ್ಮಾವತಿ ಪಿಜಿಯಲ್ಲಿದ್ದರು. ಕೊಲೆ ಮಾಡಿ ಆರೋಪಿ ರಾಹುಲ್ ಪೋನ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದ. ಬಳಿಕ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಮಾಗಡಿರೋಡ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ