Bangalore: ನಾಮಪತ್ರ ಸಲ್ಲಿಕೆ ವೇಳೆ ಚು. ಆಯೋಗಕ್ಕೆ ವಂಚಿಸಲು ಯತ್ನಿಸಿದ್ದ ವ್ಯಕ್ತಿಯ ವಿರುದ್ಧ FIR

ಬೆಂಗಳೂರು: ಎಐಎಡಿಎಂಕೆ ಅಭ್ಯರ್ಥಿಯೆಂದು  ಚುನಾವಣೆ ಆಯೋಗಕ್ಕೆ(Election Commission)ವಂಚಿಸಲು ಯತ್ನಿಸಿದ ಕುಮಾರ್ ಕಣ್ಣನ್ ವಿರುದ್ಧ  ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ(Cotton Town Police Station) ಪ್ರಕರಣ ದಾಖಲಾಗಿದೆ.  ಕುಮಾರ್ ಕಣ್ಣನ್ ಎಂಬುವರು ಗಾಂಧಿನಗರ ವಿಧಾನಸಭಾ ಕ್ಷೇತ್ರದಿಂದ(Gandhinagar Assembly Constituency) ಎಐಎಡಿಎಂಕೆ ಪಕ್ಷದ ಆಭ್ಯರ್ಥಿಯಾಗಿ  ನಕಲಿ ಎ ಫಾರಂ ಹಾಗೂ ಬಿ ಫಾರಂ ಸಲ್ಲಿಸಿದ್ದರು. ಸಲ್ಲಿಸಿದ್ದ ಅರ್ಜಿಯಲ್ಲಿ ಓ ಪನ್ನೀರ್ ಸೆಲ್ವಂ ಸಹಿಯಿತ್ತು.

ವಾಸ್ತವವಾಗಿ ಎಐಎಡಿಎಂಕೆ ಪದಾಧಿಕಾರಿಯಾಗಿ ಎಡಪ್ಪಾಡಿ ಪಳನಿಸ್ವಾಮಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಕುಮಾರ್ ಕಣ್ಣನ್ ಅವರನ್ನು ಪಕ್ಷೇತರ ಅಭ್ಯರ್ಥಿ ಎಂದು ಚುನಾವಣಾ ಆಯೋಗ ಪರಿಗಣಿಸಿತ್ತು.  ಆಯೋಗಕ್ಕೆ ವಂಚಿಸಲು ಯತ್ನಿಸಿದ ಆರೋಪದ ಹಿನ್ನೆಲೆ ಚುನಾವಣಾ ಅಧಿಕಾರಿಯೊಬ್ಬರು ಕುಮಾರ್ ಕಣ್ಣನ್ ವಿರುದ್ಧ ದೂರು ನೀಡಿದ ಮೇರೆಗೆ ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Loading

Leave a Reply

Your email address will not be published. Required fields are marked *