ಬೆಂಗಳೂರು: ಜನವರಿ 15ರವರೆಗೆ ಮಾಲ್ ಆಫ್ ಏಷ್ಯಾ ಬಂದ್

ಬೆಂಗಳೂರು: ಬೆಂಗಳೂರಿನ (Bengaluru) ಪ್ರತಿಷ್ಠಿತ ಮಾಲ್‌ಗಳಲ್ಲಿ ಒಂದಾದ ಮಾಲ್ ಆಫ್ ಏಷ್ಯಾ (Mall Of Asia) ಮುಂದಿನ 15 ದಿನಗಳ ಕಾಲ ಬಂದ್ ಆಗಲಿದೆ. ಅಲ್ಲದೇ ಮಾಲ್ ಆಫ್ ಏಷ್ಯಾ ಬಳಿ ಸೆಕ್ಷನ್ 144 (Section 144) ಜಾರಿಗೊಳಿಸಲಾಗಿದೆ.

ಮಾಲ್ ಆಫ್ ಏಷ್ಯಾ ಮೇಲೆ ಕರವೇ (Karnataka Rakshana Vedike) ಕಾರ್ಯಕರ್ತರ ಮುತ್ತಿಗೆ ಹಿನ್ನೆಲೆ ಭಾನುವಾರದಿಂದ 15 ದಿನಗಳವರೆಗೆ ಮಾಲ್ ಅನ್ನು ಮುಚ್ಚಲಾಗುತ್ತದೆ. ಮಾತ್ರವಲ್ಲದೇ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಅನ್ನು ಜಾರಿ ಮಾಡಿ ಆದೇಶ ನೀಡಲಾಗಿದೆ. ಇತ್ತೀಚಿಗಷ್ಟೆ ಬೆಂಗಳೂರಿನಾದ್ಯಂತ ಕರವೇ ಕಾರ್ಯಕರ್ತರು ಕನ್ನಡ ನಾಮಫಲಕ (Kannada Nameboard) ಹಾಕುವಂತೆ ಹೋರಾಟ ಮಾಡಿದ್ದರು.

ನಾಮಫಲಕದಲ್ಲಿ ಕನ್ನಡ ಬಳಕೆಗೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆ ವೇಳೆ ಮಾಲ್ ಆಫ್ ಏಷ್ಯಾಕ್ಕೆ ದಾಳಿ ನಡೆಸಿದ್ದರು. ಈ ವೇಳೆ ನಾಮಫಲಕ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮುಂಜಾಗ್ರತೆ ಹಿನ್ನೆಲೆ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಆದೇಶದ ಪ್ರಕಾರ 5ಕ್ಕಿಂತ ಹೆಚ್ಚು ಜನ ಸೇರೋ ಹಾಗಿಲ್ಲ. ಮಾಲ್ ಆಫ್ ಏಷ್ಯಾ ಅಕ್ಟೋಬರ್‌ನಲ್ಲಿ ಓಪನ್ ಆಗಿತ್ತು.

Loading

Leave a Reply

Your email address will not be published. Required fields are marked *