ಬಾಳೆಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಹೊಟ್ಟೆ ಹಸಿದರೂ , ಹೊಟ್ಟೆ ತುಂಬಿದ ಬಳಿಕವೂ ಹೀಗೆ ಯಾವ ಸಮಯದಲ್ಲಿ ಬೇಕಾದರೂ ತಿನ್ನಬೇಕೆನಿಸುವ ಹಣ್ಣು ಇದಾಗಿದೆ. ಬಾಳೆ ಹಣ್ಣಿನಲ್ಲಿ ಕಬ್ಬಿಣದ ಅಂಶ ಬಹಳಷ್ಟಿದೆ. ಮೊದಲೇ ಖಾಲಿ ಹೊಟ್ಟೆ ಬೇರೆ. ಇಂತಹ ಸಮಯದಲ್ಲಿ ಬಾಳೆ ಹಣ್ಣು ತಿಂದರೆ ದೇಹಕ್ಕೆ ಕಬ್ಬಿಣದ ಅಂಶಗಳು ಚೆನ್ನಾಗಿ ಹೀರಿಕೊಂಡು ದೇಹದಲ್ಲಿ ರಕ್ತದ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿಕೊಂಡರೆ ಅನೀಮಿಯಾ ರೋಗದಿಂದ ಬಹಳ ಬೇಗನೆ ಮುಕ್ತಿ ಪಡೆಯಬಹುದು.
ಖಾಲಿ ಹೊಟ್ಟೆಗೆ ಬಾಳೆಹಣ್ಣು ಒಳ್ಳೆಯದಲ್ಲವಂತೆ!
ಆದರೆ ನಿಮಗೊಂದು ಶಾಕಿಂಗ್ ವಿಷಯವನ್ನು ನಾವು ಹೇಳಲೇಬೇಕು. ಅದೇನೆಂದರೆ ಪೌಷ್ಟಿಕ ಆಹಾರ ತಜ್ಞರ ಪ್ರಕಾರ ಬಾಳೆ ಹಣ್ಣು ಖಾಲಿ ಹೊಟ್ಟೆಯಲ್ಲಿ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದಲ್ಲ!!!! ಬಾಳೆ ಹಣ್ಣಿನಲ್ಲಿ ಕಬ್ಬಿಣ, ನಾರಿನ ಅಂಶ, ಪೊಟ್ಯಾಸಿಯಂ, ಮೆಗ್ನೀಷಿಯಂ, ಸಕ್ಕರೆ ಅಂಶ ಹಾಗೂ ವಿಟಮಿನ್ ಗಳ ಪೂರೈಕೆ ಇಷ್ಟೆಲ್ಲಾ ಇದ್ದರೂ ಮನುಷ್ಯ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣನ್ನು ತಿನ್ನಬಾರದು ಎಂದು ತಾಕೀತು ಮಾಡಿದ್ದಾರೆ.
ಇದಕ್ಕೆ ಮೊದಲನೇ ಮತ್ತು ಅತಿ ಮುಖ್ಯ ಕಾರಣವೆಂದರೆ, ಬಾಳೆ ಹಣ್ಣಿನಲ್ಲಿ ಇರುವ ಸಕ್ಕರೆ ಅಂಶದ ಪ್ರಮಾಣ. ಹೌದು ಬೇರೆ ತರಕಾರಿ ಮತ್ತು ಹಣ್ಣುಗಳಿಗೆ ಹೋಲಿಸಿ ನೋಡಿದರೆ, ಬಾಳೆ ಹಣ್ಣಿನಲ್ಲಿ ಸಕ್ಕರೆ ಅಂಶದ ಪ್ರಮಾಣ ಸ್ವಲ್ಪ ಜಾಸ್ತಿಯೇ ಇದೆ. ಇದು ಖಾಲಿ ಹೊಟ್ಟೆಯಲ್ಲಿ ಮನುಷ್ಯನ ದೇಹ ಸೇರಿದರೆ ದೇಹದಲ್ಲಿ ಗ್ಲುಕೋಸ್ ಅಂಶದ ಮಟ್ಟ ಮಿತಿ ಮೀರಿ ಹೋದಂತಾಗುತ್ತದೆ ಮತ್ತು ಮನುಷ್ಯನನ್ನು ನಿದ್ದೆಗೆ ಜಾರುವಂತೆ ಪ್ರೇರೇಪಿಸುತ್ತದೆ. ಇದರಿಂದ ಮನುಷ್ಯನಿಗೆ ಬೆಳಗ್ಗಿನಿಂದ ಸಂಜೆಯವರೆಗೆ ಮಾಡುವ ಎಲ್ಲಾ ಕೆಲಸಗಳು ನಿಧಾನವಾಗಿ ತೂಕಡಿಕೆ ಬಂದಂತೆ ಆಗುತ್ತಿರುತ್ತದೆ.
ಇನ್ನು ಪ್ರತಿ ದಿನವೂ ಬೆಳಗಿನ ಉಪಹಾರದ ಮುಂಚೆ ಒಂದೊಂದು ಬಾಳೆ ಹಣ್ಣನ್ನು ತಿನ್ನುವುದನ್ನು ಅಭ್ಯಾಸ ಮಾಡಿ ಕೊಂಡಿರುವವರು ಪ್ರತಿ ದಿನ ಇದೇ ಗೋಜಿನಲ್ಲಿ ಸಿಕ್ಕಿ ಹಾಕಿ ಕೊಳ್ಳಬೇಕಾಗುತ್ತದೆ. ಇದರ ಜೊತೆಯಲ್ಲಿ ವೈದ್ಯಲೋಕ ಹೇಳುವ ಪ್ರಕಾರ ಎಲ್ಲಿ ಸಕ್ಕರೆ ಅಂಶದ ಪ್ರಮಾಣ ಜಾಸ್ತಿ ಇರುವುದೋ ಅಲ್ಲಿ ಆಮ್ಲೀಯತೆ ಕೂಡ ಅಷ್ಟೇ ಪ್ರಮಾಣದಲ್ಲಿ ಇರುತ್ತದೆಯಂತೆ. ಅಂದರೆ ಬಾಳೆ ಹಣ್ಣು ಮನುಷ್ಯನ ದೇಹ ಸೇರಿ ಜೀರ್ಣ ಆಗುವ ಸಮಯದಲ್ಲಿ ಹೆಚ್ಚು ಆಮ್ಲವನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮನುಷ್ಯನಿಗೆ ” ಗ್ಯಾಸ್ಟ್ರೀಟೈಸ್ ” ಸಮಸ್ಯೆ ಎದುರಾಗುತ್ತದೆ. ಇದು ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
ಜೀರ್ಣಾಂಗದ ಸಮಸ್ಯೆ ಕಾಡಬಹುದು
ಇನ್ನು ಜೀರ್ಣಾಂಗದ ವಿಷಯಕ್ಕೆ ಬಂದು ನೋಡುವುದಾದರೆ, ಬೆಳಗಿನ ಉಪಹಾರದ ಮುಂಚಿನ ಬಾಳೆ ಹಣ್ಣು ಸೇವನೆ ಮನುಷ್ಯನ ಜೀರ್ಣಾಂಗದ ಕಾರ್ಯಕ್ಷಮತೆಗೇ ಅಡ್ಡಿ ಉಂಟು ಮಾಡುತ್ತದೆ. ಕಾರಣ ಇಷ್ಟೇ, ನಾವು ಸಕ್ಕರೆ ಅಂಶವನ್ನು ನೇರವಾಗಿ ಸೇವಿಸದೇ, ಇನ್ನಾವುದೇ ರೀತಿಯಲ್ಲಿ ನಮ್ಮ ದೇಹಕ್ಕೆ ಸೇರ್ಪಡೆ ಮಾಡಿಕೊಂಡದ್ದೇ ಆದರೆ, ಅದು ಜೀರ್ಣ ಆಗುವ ಸಂದರ್ಭದಲ್ಲಿ ಫರ್ಮೆಂಟೇಶನ್ ಪ್ರಕ್ರಿಯೆಗೆ ಒಳಪಡುತ್ತದೆ ಮತ್ತು ಈ ಪ್ರಕ್ರಿಯೆ ಮುಗಿದ ಬಳಿಕ ಸಕ್ಕರೆ ಅಂಶ ಮದ್ಯದ ರೀತಿಗೆ ಬದಲಾಗುತ್ತದೆ. ಇದರಿಂದ ಜೀರ್ಣಾಂಗಕ್ಕೆ ಪರೋಕ್ಷವಾಗಿ ತೊಂದರೆ ಉಂಟಾಗುತ್ತದೆ.
ಆದರೆ ಪೀ ನಟ್ ಬಟರ್, ನೈಸರ್ಗಿಕ ಮೊಸರು ಅಥವಾ ಗಂಜಿ, ಕೆಲವು ಮಸಾಲೆಗಳು ( ದಾಲ್ಚಿನ್ನಿ ಅಂದುಕೊಳ್ಳಿ ) ಮತ್ತು ಕೆಲವು ಗಿಡಮೂಲಿಕೆಗಳಂತಹ ಆರೋಗ್ಯಕರ ಕೊಬ್ಬಿನ ಅಂಶದೊಂದಿಗೆ ಅದನ್ನು ಹೊಂದಿಸಿದರೆ ಏನಾಗುತ್ತದೆ ಎಂಬ ಆಲೋಚನೆ ನಿಮಗೆ ಈಗಾಗಲೇ ಬಂದಿರಬಹುದು. ಇವುಗಳು ದೇಹದ ಆಮ್ಲೀಯತೆಯನ್ನು ಕಡಿಮೆ ಮಾಡಬಲ್ಲವು ಅಥವಾ ಸಂಪೂರ್ಣವಾಗಿ ಉಪಶಮನ ಮಾಡಬಲ್ಲವು ಮತ್ತು ಗ್ಲುಕೋಸ್ ಅಂಶದ ಮೆಟಬೋಲಿಸಂ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಬಲ್ಲವು. ಆದರೆ ಖಾಲಿ ಹೊಟ್ಟೆಯಲ್ಲಿ ಪೊಟ್ಯಾಸಿಯಂ ಮತ್ತು ಮೆಗ್ನೀಷಿಯಂ ಅಂಶಗಳನ್ನು ಹೊಂದಿರುವ ಬಾಳೆ ಹಣ್ಣನ್ನು ಇವುಗಳ ಜೊತೆ ಸೇವಿಸಿದರೆ ಅಷ್ಟು ಒಳ್ಳೆಯದಲ್ಲ ಎಂಬುದು ಪೌಷ್ಟಿಕ ಆಹಾರ ತಜ್ಞರ ವಾದ. ಅದಕ್ಕೆ ಪೂರಕವಾದ ಕಾರಣಗಳನ್ನು ಅವರೇ ತಿಳಿಸಿದ್ದಾರೆ ನೋಡಿ: –
ಶಕ್ತಿ ಕುಂದುವ ಸಾಧ್ಯತೆ ಇದೆಯಂತೆ!
ಬಾಳೆ ಹಣ್ಣುಗಳಲ್ಲಿ ಇರುವ ಅಧಿಕ ಪ್ರಮಾಣದ ನೈಸರ್ಗಿಕ ಗ್ಲುಕೋಸ್ ಅಂಶ ದೇಹದಲ್ಲಿ ಶಕ್ತಿಯನ್ನು ವೃದ್ಧಿ ಮಾಡುತ್ತದೆ ಸರಿ. ಆದರೆ ತುಂಬಾ ಹೊತ್ತು ಕಳೆದ ನಂತರ ನಿಮ್ಮ ಸಂಪೂರ್ಣ ಶಕ್ತಿ ಕುಂದುವ ಸಾಧ್ಯತೆ ಹೆಚ್ಚಿರುತ್ತದೆ. ಅಂದರೆ ಇದರ ಅರ್ಥ, ಮನುಷ್ಯನಿಗೆ ಅವನ ಕೋಶಗಳಲ್ಲಿ ಸೇರಿರುವ ಶಕ್ತಿಯ ಅಂಶ ಆತನಿಗೆ ದಿನ ಪೂರ್ತಿ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು ಆಗಾಗ ನೆರವಾಗುತ್ತದೆ. ಆದರೆ ಬಾಳೆ ಹಣ್ಣಿನಲ್ಲಿ ಒಮ್ಮೆಲೇ ಬರುವ ಶಕ್ತಿಯ ಪ್ರಮಾಣವು ಮನುಷ್ಯನ ದೇಹದ ತುಂಬಾ ಹೊತ್ತಿನ ನಿರಂತರ ಕೆಲಸದ ಬಳಿಕ ಒಮ್ಮೆಲೇ ಕುಂಠಿತವಾಗುತ್ತದೆ. ಇದರಿಂದ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡಿರುವ ಯಾವುದೇ ವ್ಯಕ್ತಿಗೆ ಆ ದಿನದ ಮಿಕ್ಕ ಕೆಲಸವನ್ನು ಮಾಡಲು ದೇಹದಲ್ಲಿ ಶಕ್ತಿಯೇ ಇಲ್ಲದಂತಾಗುತ್ತದೆ.
ಬಾಳೆ ಹಣ್ಣಿನ ಕೆಲವೊಂದು ಅಡ್ಡಪರಿಣಾಮಗಳು
ಬಾಳೆ ಹಣ್ಣುಗಳು ಬೆಳಗಿನ ಸಮಯದಲ್ಲಿ ಮನುಷ್ಯನ ಖಾಲಿ ಹೊಟ್ಟೆಗೆ ಸೇರಿದರೆ ತೂಕಡಿಸುವಂತೆ ಪ್ರೇರೇಪಿಸುತ್ತದೆ ಮತ್ತು ಸದಾ ಆಯಾಸವಾದಂತಹ ಭಾವನೆಯನ್ನು ಉಂಟು ಮಾಡುತ್ತದೆ.
ಬಾಳೆ ಹಣ್ಣುಗಳು ಮೊದಲೇ ಹೇಳಿದಂತೆ ತಮ್ಮ ಒಳಗಿನ ಅಧಿಕ ಸಕ್ಕರೆ ಅಂಶದ ಪ್ರಮಾಣದಿಂದ ಆಮ್ಲೀಯತೆಗೆ ಕಾರಣವಾಗುತ್ತವೆ. ಇದರಿಂದ ಕರುಳುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ.
ಬಾಳೆ ಹಣ್ಣುಗಳು ಆಮ್ಲೀಯ ಎಂದು ಸಾಬೀತು ಪಡಿಸಿವೆ ಜೊತೆಗೆ ತಮ್ಮಲ್ಲಿ ಅಧಿಕ ಪೊಟ್ಯಾಸಿಯಂ ಅಂಶವನ್ನು ಹೊಂದಿರುತ್ತವೆ. ಬೆಳಗಿನ ಸಮಯದಲ್ಲಿ ಬಾಳೆ ಹಣ್ಣು ಸೇವನೆ ಒಳ್ಳೆಯದೇ ಆದರೆ ಖಾಲಿ ಹೊಟ್ಟೆಯಲ್ಲಲ್ಲ. ಏಕೆಂದರೆ ಜೀರ್ಣವಾಗುವ ಸಂಧರ್ಭದಲ್ಲಿ ಅಗತ್ಯವಾಗಿ ಬೇಕಾಗಿರುವ ಆಮ್ಲವನ್ನು ಮೊದಲೇ ಕಡಿಮೆ ಮಾಡಿ ಬಿಡುತ್ತದೆ. ಇದರಿಂದ ನಾವು ನಂತರ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.
ಜೊತೆಗೆ ಬಾಳೆ ಹಣ್ಣಿನಲ್ಲಿರುವ ವಿಪರೀತ ಮೆಗ್ನೀಷಿಯಂ ಅಂಶ ಮನುಷ್ಯನ ದೇಹದಲ್ಲಿ ಹರಿಯುವ ರಕ್ತದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಅಂಶಗಳ ಅಸಮತೋಲನವನ್ನು ಉಂಟು ಮಾಡುವುದಕ್ಕೆ ಕಾರಣವಾಗುತ್ತದೆ. ಇದರಿಂದ ಹೃದಯಕ್ಕೆ ಅನಪೇಕ್ಷಿತ ಪರಿಣಾಮಗಳು ಎದುರಾಗುವ ಸಂಭವ ಹೆಚ್ಚಿರುತ್ತದೆ.