ಮೈಸೂರು: ಭಜರಂಗಿ ಬಗ್ಗೆ ಮಾತಾಡುವ ಕಾಂಗ್ರೆಸಿಗರ ನವರಂಗಿ ಆಟ ಜನರಿಗೆ ಗೊತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ರಾಜ್ಯದಲ್ಲಿ ಒಸಾಮಾ ಬಿನ್ ಲಾಡೆನ್ ಮತ್ತು ಮುಲ್ಲಾ ಉಮಾರ್ ನೇತೃತ್ವದ ತಾಲಿಬಾನ್ ಸರಕಾರ ರಚನೆ ಆಗುತ್ತದೆ. ಘಜ್ನಿ ಮಹಮ್ಮದ್, ಟಿಪ್ಪು ಸುಲ್ತಾನ್ ಅನ್ನು ವೈಭವೀಕರಿಸುವ ಪಠ್ಯ ಬರುತ್ತದೆ. ಕಾಂಗ್ರೆಸ್‌ನವರು ಪಿಎಫ್ ಐ ಬ್ಯಾನ್ ತೆಗೆದು ಬಜರಂಗದಳ ಬ್ಯಾನ್ ಮಾಡುತ್ತಾರೆ. ವಿಪಕ್ಷನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ನವರಂಗಿ ಆಟ ಗೊತ್ತು. ಸೀತೆ ಹುಡುಕಿಕೊಂಡು ಹೋದ ಭಜರಂಗಿ ರಾಮನಿಗಾಗಿ ಪರ್ವತವನ್ನೇ ಎತ್ತಿ ಕೊಂಡು ಬಂದ. ಕರ್ನಾಟಕದ ಭಜರಂಗಿಗಳು ಹಿಂದುತ್ವಕ್ಕಾಗಿ, ಗೋ ಮಾತೆಗಾಗಿ ಅದೇ ಪರ್ವತದಡಿ ಕಾಂಗ್ರೆಸ್ ಅನ್ನು ಹೊಸಕಿ ಹಾಕುತ್ತಾರೆ ಕಾಂಗ್ರೆಸ್‌ನವರು ಎಚ್ಚರಿಕೆಯಿಂದ ಮಾತನಾಡಿ ಎಂದು ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದರು.