ಹವಾಮಾನ ವೈಪರೀತ್ಯ ಹಿನ್ನೆಲೆ: ಅಮರನಾಥ ಯಾತ್ರೆ ತಾತ್ಕಾಲಿಕ ರದ್ದು!

ದೆಹಲಿ: ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಹವಾಮಾನ ವೈಪರೀತ್ಯದಿಂದ ನಿರಂತರವಾಗಿ ಹಿಮ ಮತ್ತು ಮಳೆ ಬೀಳುತ್ತಿದೆ.

ಹೀಗಾಗಿ ಇನ್ನೆರಡು ದಿನ ಮಳೆಯಾಗುವ ಮುನ್ಸೂಚನೆ ಇದೆ. ಈ ಹಿನ್ನೆಲೆಯಲ್ಲಿ ಯಾತ್ರೆಗೆ ಅನುಕೂಲಕರ ವಾತಾವರಣವಿಲ್ಲದ ಕಾರಣ ಅಧಿಕಾರಿಗಳು ಯಾತ್ರೆಯನ್ನು ಸ್ಥಗಿತಗೊಳಿಸಿದ್ದಾರೆ.

62 ದಿನಗಳ ಪವಿತ್ರ ಅಮರನಾಥ ಯಾತ್ರೆ ಜುಲೈ 1 ರಿಂದ ಆರಂಭವಾಗಿದೆ. ಮೊದಲ ಬ್ಯಾಚ್‍ನಲ್ಲಿ 7 ರಿಂದ 8 ಸಾವಿರ ಮಂದಿ ಯಾತ್ರಾರ್ಥಿಗಳಿದ್ದಾರೆ. ಬೇಸ್ ಕ್ಯಾಂಪ್‍ನಿಂದ ಸುಮಾರು 13,000 ಅಡಿ ಎತ್ತರದಲ್ಲಿರುವ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಪವಿತ್ರ ಅಮರನಾಥ ಗುಹೆಯ ದೇಗುಲಕ್ಕೆ 12 ಕಿಮೀ ಪ್ರಯಾಣವನ್ನು ಕೈಗೊಂಡಿದ್ದಾರೆ. 62 ದಿನಗಳ ಯಾತ್ರೆಯು ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿದೆ.

Loading

Leave a Reply

Your email address will not be published. Required fields are marked *