ರಾಜ್ಯ ರೈತರ ನಿಯೋಗದಿಂದ ರಾಜ್ಯಪಾಲ ಥಾವರೆ ಚಂದ ಗೆಲ್ಲೋಟಿ ಭೇಟಿ ಮಾಡಿ, ಸಕ್ಕರೆ ಕಾರ್ಖಾನೆ ಮಾಲೀಕರು ಸಚಿವ ಸಂಪುಟಕ್ಕೆ ಸೇರುವುದನ್ನ ತಪ್ಪಿಸುವಂತೆ, ರಾಜ್ಯದ 30 ಲಕ್ಷ ರೈತರ ಬದುಕು ಸಂರಕ್ಷಿಸಿ ಎಂದು ಹೊಸ ಸರ್ಕಾರಕ್ಕೆ ಸೂಚನೆ ಕೊಡಿ ಎಂಬುದಾಗಿ ಮನವಿ ಮಾಡಲಾಯಿತು.
ಇಂದು ರಾಜ ಭವನದಲ್ಲಿ ರೈತ ಮುಖಂಡರ ಭೇಟಿಗೆ ಐದು ಮುಖಂಡರಿಗೆ ಸಮಯ ಅವಕಾಶ ನೀಡಿತ್ತು. ಬೇಟಿಗೆ ಹೋದಾಗ ಎಲ್ಲ ಮುಖಂಡರಿಗೂ ಅವಕಾಶ ನೀಡಬೇಕೆಂದು ಕೋರಿಕೊಂಡಾಗ ರಾಜ್ಯಪಾಲರು ಸಮ್ಮತಿಸಿ ಎಲ್ಲರನ್ನೂ ರಾಜ ಭವನದ ಒಳಗೆ ಆಹ್ವಾನಿಸಿದರು. ಸುಮಾರು 15 ನಿಮಿಷಗಳ ಕಾಲ ಎಲ್ಲ ಮುಖಂಡರ ಪರಿಚಯ ಮಾಡಿಕೊಂಡು ಕೃಷಿ ಚಟುವಟಿಕೆಯ ಬಗ್ಗೆ ಪ್ರತಿಯೊಬ್ಬರಿಂದಲೂ ತಿಳಿದುಕೊಂಡರು.
ರೈತ ಮುಖಂಡರ ಎಲ್ಲ ಒತ್ತಾಯಗಳ ಬಗ್ಗೆ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆರಂಭದಲ್ಲಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ರೈತರತ್ನ ಕುರುಬೂರು ಶಾಂತಕುಮಾರ್ ವಿವರವಾಗಿ ಸಮಸ್ಯೆ ತಿಳಿಸಿದರು.