ಆನೇಕಲ್ ; ಅತ್ತಿಬೆಲೆ ಪಟಾಕಿ ದುರಂತದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಸಾವನ್ನಪ್ಪಿದಿದಾನೆ. ಈ ಮೂಲಕ ಸಾವಿನ ಸಂಖ್ಯೆ 16 ಕ್ಕೆ ಏರಿಕೆ ಆಗಿದೆ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೆಂಕಟೇಶ್ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾನೆ.
ಯಾರದ್ದೋ ತಪ್ಪಿಗೆ ವೆಂಕಟೇಶ್ ದುರಂತ ಅಂತ್ಯ ಕಂಡಿದ್ದಾರೆ. ಪಟಾಕಿ ಖರೀದಿಗೆ ಹೋಗಿದ್ದ ವೆಂಕಟೇಶ್ ಹಾಗೂ ಸ್ನೇಹಿತ,ಅದೇ ಸಂದರ್ಭದಲ್ಲಿ ಪಟಾಕಿ ಸ್ಪೋಟವಾಗಿದೆ.ಸ್ನೇಹಿತ ದುರಂತದಿಂದ ಪಾರಾಗಿದ್ದ. ಅದ್ರೇ ಬೆಂಕಿಗೆ ವೆಂಕಟೇಶ್ ಸಿಲುಕಿದ್ದ.
ಬೆನ್ನು,ತಲೆ,ಕೈ ಕಾಲುಗಳುಗಳಿಗೆ ಬೆಂಕಿ ಸಾಗಿತ್ತು. ಫೋಟೋ ಗ್ರಾಫರ್ ಆಗಿ ಕೆಲಸ ಮಾಡ್ತಿದ್ದ ವೆಂಕಟೇಶ್, ಯಾರಾದ್ದೋ ಕಾರ್ಯಕ್ರಮಕ್ಕೆ ಪಟಾಕಿ ತರಲು ಹೋಗಿದ್ದ ವೇಳೆ ಘಟನೆ ಸಂಭವಿಸಿದೆ. ಇನ್ನೂ ಮೃತ ವೆಂಕಟೇಶ್ ಬಾಡಿ ಬಿಲ್ಡರ್ ಕೂಡ ಆಗಿದ್ದ ಎನ್ನಲಾಗಿದೆ.