ಅಟ್ಟಹಾಸ ಮೆರೆದ ಪುಡಿ ರೌಡಿಗಳು: ನಡು ರಸ್ತೆಯಲ್ಲಿ ಯುವಕನ ಮೇಲೆ ಲಾಂಗ್ ನಿಂದ ಹಲ್ಲೆ

ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಮಂಡ್ಯದ  ಹೊಳಲು ಗ್ರಾಮದಲ್ಲಿ ನಡೆದಿದೆ. ಮಾದ ಅಲಿಯಾಸ್ ಮಾದಪ್ಪ ಎಂಬಾತನನ್ನು ಬಾಸ್ ಎಂದು ಕರೆಯದೇ ಇರುವುದಕ್ಕೆ ಮಾದ ಹಾಗೂ ಆತನ ಸಹಚರರಾದ ಚಿಂಟು, ತರುಣ್, ಸುಶಾಂತ್ ಹಾಗೂ ಚಂದನ್ ಎಂಬುವವರು ಶಾರಂತ್ ಎಂಬ ಯುವಕನ ಬಳಿ ಗಲಾಟೆ ಮಾಡಿದ್ದಾರೆ. ಬಳಿಕ ಮಚ್ಚಿನಿಂದ ಹೊಡೆದು, ಡ್ರಾಗನ್ನಿಂದ ಚುಚ್ಚಿ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಈ ಹಿಂದೆ ಮಾದಪ್ಪನಿಗೆ ಬಾಸ್ ಎಂದು ಕರೆಯಬೇಕು ಎಂದು ಪುಡಿರೌಡಿಗಳು ಎಚ್ಚರಿಸಿದ್ದರು. ಇದಕ್ಕೆ ಶಾರಂತ್ ಅವನು ನನಗೆ ಯಾವ ಬಾಸ್ ಎಂದು ಹೇಳಿದ್ದ. ಇದೇ ವಿಚಾರಕ್ಕೆ ಗುರುವಾರ ಸ್ನೇಹಿತರೊಂದಿಗೆ ಹುಟ್ಟು ಹಬ್ಬ ಆಚರಿಸಿ ಗ್ರಾಮದ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ವೇಳೆ ದುಷ್ಕರ್ಮಿಗಳು ಶಾರಂತ್ ಮೇಲೆ ದಾಳಿ ನಡೆಸಿದ್ದಾರೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು  ಬಲೆ ಬೀಸಿದ್ದಾರೆ.

Loading

Leave a Reply

Your email address will not be published. Required fields are marked *