ಬೆಂಗಳೂರು: ಮಚ್ಚಿನಿಂದ ಹಲ್ಲೆ ನಡೆಸಿ ಓರ್ವನನ್ನ ಹತ್ಯೆ ಮಾಡಿ, ಮತ್ತೊಬ್ಬನ ಮೇಲೆ ಹಲ್ಲೆ ಮಾಡಿರುವ ಘಟನೆ ನಗರದ ರಾಮಮೂರ್ತಿನಗರದ ವಿಜಿನಾಪುರದಲ್ಲಿ ನಡೆದಿದೆ. ಇರದ್ ರಾಜ್ ಮೃತ ವ್ಯಕ್ತಿ. ಇನ್ನು ಕೆಲಸ ಮುಗಿಸಿ ರಾತ್ರಿ ಬೈಕ್ನಲ್ಲಿ ಇರದ್ ರಾಜ್, ವಿಜಯ್ ಎಂಬಿಬ್ಬರು ತೆರಳುತ್ತಿದ್ದರು. ತಡರಾತ್ರಿ ಬೈಕ್ನಲ್ಲಿ ಬರುತ್ತಿದ್ದ ಇರದ್ ರಾಜ್, ವಿಜಯ್ಗೆ ಆರೋಪಿ ರಾಜೇಶ್ ಎಂಬಾತ ‘ಇಷ್ಟೊತ್ತಲ್ಲಿ ನಮ್ಮ ಏರಿಯಾಗೆ ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾನೆ. ಇದನ್ನೆಲ್ಲ ಕೇಳಲು ನೀವ್ಯಾರು ಎಂದಿದ್ದ ಇರದ್ ರಾಜ್ಗೆ ಮಚ್ಚಿನಿಂದ ತಲೆಗೆ ಹೊಡೆದಿದ್ದ.ಇನ್ನು ಪರಿಚಯ ಹೇಳಿಕೊಂಡಿದ್ದ ವಿಜಯ್ಗೂ ಹೊಡೆದು ಕಳಿಸಿದ್ದಾರೆ. ನಂತರ ಬೈಕ್ನಲ್ಲಿ ಮನೆಗೆ ತೆರಳಿದ್ದ ಇರದ್ ರಾಜ್, ವಿಜಯ್ ಇಬ್ಬರು ರಕ್ತ ಸೋರದಂತೆ ಪೌಡರ್ ಹಚ್ಚಿ ಮಲಗಿದ್ದಾರೆ. ಆದರೆ, ಇರದ್ ರಾಜ್ ಬೆಳಗಾಗುವಷ್ಟರಲ್ಲಿ ರಕ್ತಸ್ರಾವವಾಗಿ ಮೃತಪಟ್ಟಿದ್ದ. ಕೊಡಲೇ ವಿಜಯ್ ರಾಮಮೂರ್ತಿನಗರ ಠಾಣೆಗೆ ಮಾಹಿತಿ ನೀಡಿದ್ದಾನೆ. ಈ ಕುರಿತು ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ರಾಜೇಶ್, ಮತ್ತಿತರ ಆರೋಪಿಗಳಿಗಾಗಿ ಪೊಲೀಸರ ಶೋಧ ನಡೆಸಿದ್ದಾರೆ.