ಬೆಂಗಳೂರು: ತಮಿಳುನಾಡು ಡಿಎಂಕೆ ಮುಖಂಡ ವಿ.ಕೆ.ಗುರುಸ್ವಾಮಿ ಮೇಲೆ ಹಲ್ಲೆ ಪ್ರಕರಣ ಸಂಬಂಧ ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳುವಂತಿದೆ ಆರೋಪಿಗಳಿಂದ ನಡೆದಿರೊ ಡೆಡ್ಲಿ ಅಟ್ಯಾಕ್
70ಕ್ಕೂ ಹೆಚ್ಚು ಬಾರಿ ತಲ್ವಾರ್ ನಿಂದ ಹಲ್ಲೆ ಮಾಡಿರುವ ಆರೋಪಿಗಳು ಘಟನೆಯ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸೆಪ್ಟೆಂಬರ್ 4 ರಂದು ಸಂಜೆ 4.30 ಕ್ಕೆ ನಡೆದಿದ್ದ ಘಟನೆಯಾಗಿದೆ. ಹೋಟೆಲ್ ನಲ್ಲಿ ಕುಳಿತಿದ್ದವನ ಮೇಲೆ ಮುಗಿ ಬಿದ್ದಿದ್ದ ತಮಿಳುನಾಡು ಗ್ಯಾಂಗ್ ಬ್ರೋಕರ್ ಜೊತೆಗೆ ಕೂತು ಮಾತನಾಡ್ತಿದ್ದ ವಿ.ಕೆ.ಗುರುಸ್ವಾಮಿ ಈ ವೇಳೆ ಇದ್ದಕ್ಕಿದ್ದಂತೆ ಬಂದ ಐವರಿಂದ ಡೆಡ್ಲಿ ಅಟ್ಯಾಕ್ ನಡೆಸಿ ಹೋಟೆಲ್ ಇಡೀ ಅಟ್ಟಾಡಿಸಿ ಹಲ್ಲೆ ಮಾಡಿರೊ ಆಸಾಮಿಗಳು
ಘಟನೆಗೆ ಹೆದರಿ ಹೋಟೆಲ್ ನಲ್ಲಿದ್ದ ಜನ ಚೆಲ್ಲಾಪಿಲ್ಲಿಯಾಗಿ ಓಡೋಡಿ ಹೋಗಿದ್ದಾರೆ. ಮಧುರೈನ ನಟೋರಿಯಸ್ ರೌಡಿ ಪಾಂಡಿಯನ್ ಗ್ಯಾಂಗ್ ನಿಂದ ನಡೆದಿದ್ದ ಅಟ್ಯಾಕ್. 70 ಕ್ಕೂ ಹೆಚ್ಚು ಬಾರಿ ಲಾಂಗ್ ಏಟು ಬಿದ್ದಿದ್ದರು ಬದುಕುಳಿದ ಗುರುಸ್ವಾಮಿ ಅಚ್ಚರಿ ಎನಿಸುತ್ತದೆ. ಘಟನೆ ಸಂಬಂಧ ಬಾಣಸವಾಡಿ ಪೊಲೀಸರು ಕಾರ್ತಿಕ್,ವಿನೋದ್ ಕುಮಾರ್,ಪ್ರಸನ್ನ ಎಂಬುವರನ್ನ ಬಂಧಿಸಿದ್ದಾರೆ.