ಬೆಂಗಳೂರು:- ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಮತ ಉದ್ಭವವಾಗಿಲ್ಲ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ಶಾಸಕ ವಿಶ್ವನಾಥ್ ನಡುವೆ ಅಭಿಪ್ರಾಯ ಬೇಧವಿದೆಯೇ ಹೊರತು ಭಿನ್ನಮತವಲ್ಲ ಎಂದರು
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದು ಹಾಗೂ ಕೆಲ ತಪ್ಪು ನಿರ್ಧಾರಗಳಿಂದಾಗಿ ಬಿಜೆಪಿ ಸೋಲಿಗೆ ಕಾರಣವಾಯಿತು, ಆತ್ಮಾವಲೋಕನ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ದೊಡ್ಡವರಾಗಿಬಿಡುತ್ತೀರಾ? ಉತ್ತರ ಕರ್ನಾಟಕದ ಜನ ವಿಜಯೇಂದ್ರ ಆಯ್ಕೆ ಸ್ವಾಗತ ಮಾಡಿದ್ದಾರೆ. ಯಡಿಯೂರಪ್ಪ ಆ ಭಾಗಕ್ಕೆ ಹೋದಲ್ಲಿ ಜನ ಸ್ವಾಗತ ಮಾಡುತ್ತಾರೆ ವಿನಾಃ ಕಾರಣ ಯಡಿಯೂರಪ್ಪ ಕುಟುಂಬದ ವಿರುದ್ಧ ಆರೋಪ ಮಾಡುವುದನ್ನು ಕೈಬಿಡಬೇಕು. ಇದು ಸರಿಯಲ್ಲ. ನಿಲ್ಲಿಸಬೇಕು, ಇಲ್ಲದೇ ಇದ್ದಲ್ಲಿ, ನಾವೂ ಸಭೆ ಸೇರುತ್ತೇವೆ, ನಮಗೂ ಗೊತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಎಚ್ಚರಿಕೆ ನೀಡಿದರು.