ಬಿಜೆಪಿ ತರ ಯಾವತ್ತೂ ತಪ್ಪಿಸಿಕೊಂಡು ಕೆಲಸ ಮಾಡೋದಿಲ್ಲ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ಬಿಜೆಪಿ ತರ ಯಾವತ್ತೂ ತಪ್ಪಿಸಿಕೊಂಡು ಕೆಲಸ ಮಾಡೋದಿಲ್ಲ, ನಾವು ಕೊಟ್ಟ ಭರವಸೆಗಳನ್ನು ಈಡೇರಿಕೆ ಮಾಡೇ ಮಾಡ್ತೀವಿ ಅವರು ಪ್ರತಿಪಕ್ಷದಲ್ಲಿ ಇಟ್ಕೊಂಡು ಸೂಚನೆ ಮತ್ತು ಸಲಹೆಗಳನ್ನು ಕೊಡಲಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಕಿಡಿ ಕಾರ್ಯಕರ್ತರು.
ಆನೇಕಲ್ ತಾಲೂಕಿನ ಸೂರ್ಯ ಸಿಟಿ ಒಂದನೇ ಹಂತದಲ್ಲಿ ಹಮ್ಮಿಕೊಂಡಿದ್ದ ಮೂರನೇ ಬಾರಿ ಆಯ್ಕೆಯಾದ ಶಾಸಕ ಶಿವಣ್ಣ ಅಭಿನಂದನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ಅವರು ಬಿಜೆಪಿ ವಿರುದ್ಧ ಟೀಕೆಗಳ ಸುರಿಮಳೆಯನ್ನು ಸುರಿದಿದ್ದಾರೆ.
ಯಡಿಯೂರಪ್ಪ ಎರಡು ವರ್ಷ ಮತ್ತು ಬಸವರಾಜ್ ಬೊಮ್ಮಾಯಿ ಎರಡು ವರ್ಷ ಆಡಳಿತವನ್ನು ನಡೆಸಿದ್ದಾರೆ ಬಿಜೆಪಿ ಮೆನು ಫಸ್ಟ್ ದಲ್ಲಿ 600 ಭರವಸೆಗಳನ್ನು ಕೊಟ್ಟಿದ್ದರು ಆದರೆ ಅವರು ಬರಿ 60 ಭರವಸೆಗಳನ್ನ ಈಡೇರಿಕೆ ಮಾಡಿದರೆ. ಅವರಿಗೆ ಮಾತನಾಡುವ ನೈತಿಕತೆ ಇಲ್ಲ ಮಾನ ಮರ್ಯಾದೆ ಇದ್ರೆ ಕೇಂದ್ರ ಸರ್ಕಾರ ಬೆಲೆ ಏರಿಕೆ ವಿಚಾರವಾಗಿ ಮಾತನಾಡಲಿ ಕೇಂದ್ರ ಸರ್ಕಾರದ ಮನದಟ್ಟು ಮಾಡುವ ಕೆಲಸ ಮಾಡಲಿ .
ಕಾಂಗ್ರೆಸ್ ಪಕ್ಷ 2013ರಲ್ಲಿ ಮತ್ತು 2018 ರವರೆಗೆ 165 ಭರವಸೆಗಳನ್ನು ಕೊಟ್ಟಿದ್ದು 158 ಭರವಸೆಗಳನ್ನ ಈಡಿರಿಕೆ ಮಾಡಿಕೊಟ್ಟಿದ್ವಿ ನಾವು ಮಾತಿಗೆ ತಪ್ಪು ಅವರೆಲ್ಲ ತಪ್ಪುವುದಿಲ್ಲ ಬಿಜೆಪಿ ತರ ಬುರಡೆ ಪಕ್ಷನು ಅಲ್ಲ. ಎಂದು ಬಿಜೆಪಿ ವಿರುದ್ಧ ಸಚಿವ ರಾಮಲಿಂಗಾ ರೆಡ್ಡಿ ಸೂರ್ಯ ಸಿಟಿಯಲ್ಲಿ ಹೇಳಿಕೆ ನೀಡಿದರು..

Loading

Leave a Reply

Your email address will not be published. Required fields are marked *