ಧಾರವಾಡ: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ಉಗ್ರರ ಚಟುವಟಿಕೆಗಳು ಗರಿಗೆದರಿವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದ್ದಾರೆ. ಧಾರವಾಡದಲ್ಲಿ (Dharwad) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ (Bengaluru) ಐವರು ಶಂಕಿತ ಉಗ್ರರ (Suspected Terrorist) ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಸೆರೆ ಸಿಕ್ಕ ಶಂಕಿತ ಉಗ್ರರ ಬಳಿ ಪಿಸ್ತೂಲ್, ಸಜೀವ ಗುಂಡು, ಸ್ಯಾಟ್ಲೈಟ್ ಫೋನ್ ಸೇರಿದಂತೆ ಅನೇಕ ವಸ್ತುಗಳು ಸಿಕ್ಕಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಕೆಟ್ಟ ಹುಳಗಳು, ಹಾವು ಹಾಗೂ ಚೇಳುಗಳು ಹೊರ ಬರುತ್ತಿವೆ ಎಂದು ಕಿಡಿಕಾರಿದ್ದಾರೆ.
ಇವರನ್ನು ಕಾಂಗ್ರೆಸ್ ಸರ್ಕಾರ ಪೋಷಿಸುತ್ತಿದೆ. ಇದೇ ರೀತಿ ಉಗ್ರರನ್ನು ಪೋಷಣೆ ಮಾಡಿ ದೇಶದ ಲಕ್ಷಾಂತರ ಜನರನ್ನು ಕಾಂಗ್ರೆಸ್ ಕೊಂದು ಹಾಕಿದೆ. ಇವರ ಅಧಿಕಾರದಿಂದ ಈ ರೀತಿಯ ಪ್ರಕರಣಗಳು ಇನ್ನೂ ಹೆಚ್ಚುತ್ತವೆ. ಬಂಧಿತರು ಲಷ್ಕರ್ ಎ ತೊಯ್ಬಾ ಸಂಘಟನೆಯ ಸಂಪರ್ಕದಲ್ಲಿರುವಂತವರು. ಅಷ್ಟೇ ಅಲ್ಲ ಬಿಜೆಪಿ ಸರ್ಕಾರ ಇದ್ದಾಗಲೂ ಕೂಡ ಹರ್ಷನ ಕೊಲೆಗಡುಕರು ಜೈಲಿನಲ್ಲಿ ತಮ್ಮ ಕುಟುಂಬದವರ ಜೊತೆ ಮಾತನಾಡುತ್ತಿದ್ದರು ಎಂದು ಆಕ್ರೋಶ ಹೊರ ಹಾಕಿದ್ದಾರೆ.