ರಾಮನಗರ ಬೆಂಗಳೂರಿಗೆ ಸೇರ್ಪಡೆ ವಿಚಾರ – ಡಿಕೆಶಿ ಪರ ಅರವಿಂದ‌ ಬೆಲ್ಲದ್ ಬ್ಯಾಟಿಂಗ್

ಬೆಂಗಳೂರು;- ಬೆಂಗಳೂರು ಬೆಳೆಯಬೇಕು ಅಂದ್ರೆ ಅದರ ಸುತ್ತಮುತ್ತಲ ಪ್ರದೇಶಗಳೂ ಅಭಿವೃದ್ಧಿ ಆಗಬೇಕು ಎಂದು ಶಾಸಕ ಅರವಿಂದ‌ ಬೆಲ್ಲದ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬೆಂಗಳೂರಿನ ಸುತ್ತಮುತ್ತಲಿನ ನಗರ, ಗ್ರಾಮಗಳನ್ನು ಸೇರಿಸಿ ಎನ್‌ಸಿ‌ಆರ್ ಮಾಡುವುದು ಸೂಕ್ತ. ಇದರಲ್ಲಿ ರಾಮನಗರ, ಕೋಲಾರ, ತುಮಕೂರು, ಬೆಂಗಳೂರಿನ ಭಾಗಗಳನ್ನೂ ಸೇರಿಸಲಿ. ಈ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಲಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ದೆಹಲಿ ಸುತ್ತಮುತ್ತ ನ್ಯಾಷನಲ್ ಕ್ಯಾಪಿಟಲ್ ರೀಜನ್ ಇದೆ. ಎನ್‌ಸಿ‌ಆರ್ ಅಂದ್ರೆ ಇದಕ್ಕೆ ದೆಹಲಿ ಮತ್ತು ಗುರುಗ್ರಾಮ, ನೊಯ್ಡಾ ಸೇರಿಕೊಂಡಿದೆ. ಅಲ್ಲೇನೇ ಅಭಿವೃದ್ಧಿ ಮಾಡಿದರೂ ಎನ್‌ಸಿ‌ಆರ್ ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡುತ್ತಾರೆ. ನಮ್ಮ ರಾಜ್ಯದಲ್ಲೂ ಕರ್ನಾಟಕ ಕ್ಯಾಪಿಟಲ್ ರೀಜನ್ ಮಾಡಲಿ. ಬೆಂಗಳೂರು ಬೆಳೆಯಬೇಕು ಅಂದ್ರೆ ಅದರ ಸುತ್ತಮುತ್ತಲ ಪ್ರದೇಶಗಳೂ ಅಭಿವೃದ್ಧಿ ಆಗಬೇಕು. ಈ ನಿರ್ಧಾರ ರಾಜಕೀಯ ದೃಷ್ಟಿಯಿಂದ ಕೈಗೊಳ್ಳದೇ ಅಭಿವೃದ್ಧಿ ದೃಷ್ಟಿಯಿಂದ ಕೈಗೊಳ್ಳಲಿ ಎಂದು ತಿಳಿಸಿದರು.

Loading

Leave a Reply

Your email address will not be published. Required fields are marked *