ಮಂಗಳೂರು: ನಗರದಲ್ಲಿ ಮಾದಕವಸ್ತು ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೈಲ್ಯಾಂಡ್ ಬಳಿಯ ಅಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ನರ್(45) ಬಾಂಗ್ ಮಿಶ್ರಿ ಚಾಕೊಲೇಟ್ ಮಾರುತ್ತಿದ್ದನು. ಈತನನ್ನು ಮಂಗಳೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಬಳಿ ಇದ್ದ 5,500 ರೂ. ಮೌಲ್ಯದ ಬಾಂಗ್ ಚಾಕೊಲೇಟ್ ಜಪ್ತಿ ಮಾಡಿದ್ದಾರೆ. ಕಾರ್ ಸ್ಟ್ರೀಟ್ ಬಳಿ ಬಾಂಗ್ ಮಿಶ್ರಿ ಚಾಕೊಲೇಟ್ ಮಾರುತ್ತಿದ್ದ ಮನೋಹರ್ ಶೇಟ್ (49) ನನ್ನು ಮಂಗಳೂರು ಉತ್ತರ ಠಾಣಾ ಬಂಧಿಸಿದ್ದಾರೆ. ಆರೋಪಿಯಿಂದ 48,000 ರೂ. ಮೌಲ್ಯದ ಬಾಂಗ್ ಚಾಕೊಲೇಟ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.