ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೆಲಸ ಹುಡುಕಿಕೊಂಡು ಬರುವವರ ಸಂಖ್ಯೆ ದಿನದಿಂದ ದಿಕ್ಕೆ ಏರುತ್ತಲೇ ಇದೆ ಆದರೆ ಇಲ್ಲಿ ಕೆಲಸ ಹುಡುಕಿ ಸಾಕಾಗುವವರು ತಮಗೆ ಬೇಕಾದ ಕೆಲಸ ಸಿಗದೇ ಕಳ್ಳತನದ ಗೀಳಿಗೆ ಬೀಳುತ್ತಾರೆ. ಹೌದು.. ಪೇಂಟ್ ಕೆಲಸಕ್ಕೆ ಬಂದು ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯ ಬಂಧನ ಮಾಡಿದ ಬಸವನಗುಡಿಯ ಪೊಲೀಸರು. ಉತ್ತರ ಪ್ರದೇಶ ಮೂಲಕ ಉಮೇಶ್ ಪ್ರಸಾದ್ ಜಾಧವ್ ಕೆಲಸಕ್ಕೆಂದು ಬೆಂಗಳೂರಿಗೆ ಬಂದು ಕಳ್ಳನ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಪೇಂಟ್ ಮಾಡಲು ಮನೆಗೆ ಬಂದಿದ್ದ ವೇಳೆ ಮನೆ ಮಾಲೀಕರ ಕಣ್ಣು ತಪ್ಪಿಸಿ ಕಬೋರ್ಡ್ ನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಉಮೇಶ್ ಜಾಧವ್. ಆನಂತರ ದೂರಿನ ಆಧಾರದ ಮೇಲೆ ಉಮೇಶ್ ಕದ್ದಿರುವುದು ಬೆಳಕಿಗೆ ಬಂದಿದ್ದು ಬಂಧಿತನಿಂದ 6 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.