ಬೆಂಗಳೂರು;- ನಗರದ ಸುಬ್ರಮಣ್ಯನಗರ ಪೊಲೀಸರು ಕಾರ್ಯಚರಣೆ ನಡೆಸಿ ಮಹಿಳೆ ಕೈ ಕತ್ತರಿಸಿದ್ದ ರೌಡಿಶೀಟರ್ನನ್ನು ಅರೆಸ್ಟ್ ಮಾಡಿದ್ದಾರೆ.ಅಭಿ ಅಲಿಯಾಸ್ ಅಮೂಲ್ ಬಂಧಿತ ಆರೋಪಿ. ಹುಡುಗಿ ಓರ್ವಳ ವಿಚಾರಕ್ಕೆ ರಾಕೇಶ್ ಮತ್ತು ಅಭಿ ನಡುವೆ ವೈಷಮ್ಯ ಇತ್ತು. ಈ ಹಿನ್ನಲೆ ಹಲವಾರು ಬಾರಿ ಅಭಿ ಮತ್ತು ರಾಕೇಶ್ ಗಲಾಟೆ ಮಾಡಿಕೊಂಡಿದ್ದರು. ಕಳೆದ ಭಾನುವಾರ ಅಭಿ ರಾತ್ರಿ ರಾಕೇಶ್ ಮನೆಗೆ ಹಲ್ಲೆ ಮಾಡಲು ಹೋಗಿದ್ದನು. ಈ ವೇಳೆ ರಾಕೇಶ್ ಮನೆ ಬಾಗಿಲನ್ನು ಮಚ್ಚಿನಿಂದ ಬಡಿದಿದ್ದಾನೆ.
ಈ ವೇಳೆ ಮನೆಯಲ್ಲಿ ಬಾಡಿಗೆ ಇದ್ದ ಬೇರೊಬ್ಬ ಮಹಿಳೆ ಮನೆಯ ಬಾಗಿಲು ತೆಗೆದಿದ್ದಾರೆ. ಬಾಗಿಲು ತೆಗೆಯುತ್ತಿದ್ದಂತೆ ಅಭಿ ಮಹಿಳೆಗೆ ಮಚ್ಚು ಬೀಸಿದ್ದಾನೆ. ರೌಡಿ ಅಭಿ ಬೀಸಿದ್ದ ಮಚ್ಚಿನ ಏಟಿಗೆ ಮಹಿಳೆ ಕೈ ಕತ್ತರಿಸಿ ಹೋಗಿದೆ. ಪ್ರಕರಣ ದಾಖಲಿಸಿಕೊಂಡ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದರು. ಈಗ ಆರೋಪಿಯನ್ನು ಅರೆಸ್ಟ್ ಮಾಡಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.