ಮೊದಲ ಬಾರಿ ಆಡಿಯೋ ಹೇಳಿಕೆ ಬಿಡುಗಡೆ ಮಾಡಿದ ವ್ಯಾಗ್ನರ್ ಸೇನಾ ಮುಖ್ಯಸ್ಥ

ಮಾಸ್ಕೋ: ವ್ಯಾಗ್ನರ್ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೋಜಿನ್ ಅವರು ಶನಿವಾರ ನಡೆಸಿದ ಸಶಸ್ತ್ರ ದಂಗೆಯ ಬಳಿಕ ಮೊದಲ ಬಾರಿ ಆಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ತನ್ನ ಸೇನೆಯ ಮೇಲೆ ದಾಳಿ ಮಾಡಿ 30 ಹೋರಾಟಗಾರರನ್ನು ಹತ್ಯೆ ಮಾಡಿದ ಪ್ರತಿಕಾರವಾಗಿ ಈ ದಂಗೆ ನಡೆಸಲಾಗಿದೆ ಎಂದು ಹೇಳುವ ಮೂಲಕ ಪ್ರಿಗೋಜಿನ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

“ಅನ್ಯಾಯದ ವಿರುದ್ಧ ನಾವು ನಮ್ಮ ಮೆರವಣಿಗೆಯನ್ನು ಪ್ರಾರಂಭಿಸಿದ್ದೇವೆ ಎಂದು ಪ್ರಿಗೋಜಿನ್ 11 ನಿಮಿಷಗಳ ಆಡಿಯೊದಲ್ಲಿ ಹೇಳಿದ್ದು ಪ್ರಿಗೋಜಿನ್ ಎಲ್ಲಿಂದ ಹೇಳಿಕೆ ಬಿಡುಗಡೆ ಮಾಡಿದ್ದಾರೆ ಅಥವಾ ಅವರ ಮುಂದಿನ ನಡೆ ಏನು ಎಂಬುದರ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ರಾಜಧಾನಿ ಮಾಸ್ಕೋವನ್ನು ತೆಕ್ಕೆಗೆ ತೆಗೆದುಕೊಂಡು ಪುಟಿನ್ ಸರ್ಕಾರದ ಪದಚ್ಯುತಿಗೆ ಹೊರಟಿದ್ದ ಪ್ರಿಗೋಜಿನ್ ಹಾಗೂ ಆತನ ನೇತೃತ್ವದ ವಾಗ್ನರ್ ಪಡೆಯ ಯಾರೊಬ್ಬರ ವಿರುದ್ಧವೂ ರಷ್ಯಾ ಕ್ರಮ ಕೈಗೊಳ್ಳದೇ ಇರಲು ಒಪ್ಪಿಗೆ ನೀಡಿದೆ.

Loading

Leave a Reply

Your email address will not be published. Required fields are marked *