ಪ್ರಭಾಸ್ ಗೆ ಪ್ರೀತಿಯಿಂದ ಹೊಸ ಹೆಸರಿಟ್ಟ ಅನುಷ್ಕಾ ಶೆಟ್ಟಿ

ರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ (Anushka Shetty) ಅವರು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗಟ್ಟಿ ನೆಲೆ ಗಿಟ್ಟಿಸಿಕೊಂಡಿದ್ದಾರೆ. ಸದ್ಯ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ ಚಿತ್ರದ ಮೂಲಕ ಕಂಬ್ಯಾಕ್ ಆಗ್ತಿದ್ದಾರೆ.

ಈ ನಡುವೆ ಪ್ರೀತಿಯಿಂದ ಪ್ರಭಾಸ್‌ಗೆ ಅನುಷ್ಕಾ ಏನೆಂದು ಕರೆಯುತ್ತಾರೆ ಎಂಬುದನ್ನ ರಿವೀಲ್ ಮಾಡಿದ್ದಾರೆ.

ಮಿರ್ಚಿ, ಬಿಲ್ಲಾ, ಬಾಹುಬಲಿ, ಬಾಹುಬಲಿ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ- ಪ್ರಭಾಸ್ (Prabhas) ಜೋಡಿಯಾಗಿ ನಟಿಸಿದ್ದರು. ಇಬ್ಬರ ಕೆಮಿಸ್ಟ್ರಿ ತೆರೆಯ ಮೇಲೆ ಮೋಡಿ ಮಾಡಿತ್ತು. ಸಿನಿಮಾ ನೋಡಿದವರು, ತೆರೆ ಹಿಂದೆ ಕೂಡ ಇಬ್ಬರ ನಡುವೆ ಲವ್ವಿ-ಡವ್ವಿ ಇದೆ ಎಂದು ಹೇಳಲಾಗಿತ್ತು. ಈ ಮಧ್ಯೆ ಕೃತಿ ಸನೋನ್ (Kriti Sanon) ಹೆಸರು ಕೂಡ ಪ್ರಭಾಸ್ ಜೊತೆ ತಳುಕು ಹಾಕಿತ್ತು. ಈಗ ಮತ್ತೆ ಬಾಹುಬಲಿ ಜೋಡಿಯ ಮ್ಯಾಟ್ರರ್ ಚಾಲ್ತಿಗೆ ಬಂದಿದೆ.

ಇತ್ತೀಚಿಗೆ ಅನುಷ್ಕಾ ನಟಿಸಿರುವ ‘ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ’ (Miss Shetty Mr Poli Shetty) ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಅನುಷ್ಕಾ- ನವೀನ್ ಪೋಲಿ ಶೆಟ್ಟಿ ಜೋಡಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಪ್ರಭಾಸ್ ಕೂಡ ಚಿತ್ರದ ಟೀಸರ್ ನೋಡಿ ಭೇಷ್ ಎಂದಿದ್ದಾರೆ. ಸಿನಿಮಾದ ಟೀಸರ್ ಮನರಂಜನೆಯನ್ನ ಒಳಗೊಂಡಿದೆ. ಇಡೀ ತಂಡಕ್ಕೆ ಶುಭವಾಗಲಿ ಎಂದು ವಿಶ್ ಮಾಡಿದ್ದಾರೆ. ಇದನ್ನ ನಟಿ ಅನುಷ್ಕಾ ತಮ್ಮ ಖಾತೆ ರೀ ಶೇರ್ ಮಾಡಿ, ಧನ್ಯವಾದ ಪಪ್ಸು ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಖತ್ ಸದ್ದು ಮಾಡ್ತಿದೆ.

ಅನುಷ್ಕಾ- ಪ್ರಭಾಸ್ ನಡುವೆ ಏನು ಸರಿ ಇಲ್ಲಾ ಅದಕ್ಕೆ ದೂರವಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಒಬ್ಬರ ಚಿತ್ರಕ್ಕೆ ಮತ್ತೊಬ್ಬರು ಬೆಂಬಲ ಸೂಚಿಸೋದು ನೋಡಿ, ಇಬ್ಬರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ಇದೆ ಎಂದು ಹೇಳಲಾಗುತ್ತಿದೆ. ಬಾಹುಬಲಿ ಜೋಡಿ ರಿಯಲ್ ಲೈಫ್‌ನಲ್ಲೂ ಒಂದಾಗಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.

Loading

Leave a Reply

Your email address will not be published. Required fields are marked *