ಮತ್ತೊಂದು ಯಡವಟ್ಟಿನಲ್ಲಿ ತಗಲಾಕಿಕೊಂಡ್ರಾ ನಟ ದರ್ಶನ್

ಬೆಂಗಳೂರುಸ್ಯಾಂಡಲ್‌ವುಡ್‌ ಖ್ಯಾತ ನಟ ದರ್ಶನ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ. ಇತ್ತೀಚೆಗಷ್ಟೇ ನಟನ ಮನೆಯ ನಾಯಿ ಎದುರುಗಡೆ ಮನೆಯ ಮಹಿಳೆಗೆ ಕಚ್ಚಿದ್ದ ಆರೋಪ ಎದುರಾಗಿದ್ದು, ಈ ಸಂಬಂಧ ಕೇಸ್‌ ದಾಖಲಾಗಿತ್ತು. ಈಗ ಸಾರ್ವಜನಿಕ ಸ್ಥಳದಲ್ಲಿ ಲಾಂಗ್ ಹಿಡಿದು ವಿವಾದಕ್ಕೆ ಒಳಗಾಗಿದ್ದಾರೆ.  ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಮತ್ತೆ ಸಂಕಷ್ಟದ ಸುಳಿಗೆ ಸಿಲುಕಿದ್ದು, ಸಾರ್ವಜನಿಕ ಸ್ಥಳದಲ್ಲಿ ಲಾಂಗ್ ಹಿಡಿದು ವಿವಾದಕ್ಕೆ ಒಳಗಾಗಿದ್ದಾರೆ. 2 ದಿನಗಳ ಹಿಂದೆ ರಾಜ್ಯ ರಾಜಧಾನಿಯ ಜಯನಗರದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಟ ದರ್ಶನ್‌ ಲಾಂಗ್‌ ಹಿಡಿದಿದ್ದಾರೆ.

ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್‌ ನಟರಾದ ದರ್ಶನ್ ಹಾಗೂ ಅಭಿಶೇಕ್‌ ಇಬ್ಬರೂ ಅತಿಥಿಗಳಾಗಿ ಹೋಗಿದ್ದರು. ಈ ವೇಳೆ ದರ್ಶನ್ ಮತ್ತು ಅಭಿಗೆ ಅಭಿಮಾನಿಗಳು ಬೆಳ್ಳಿ ಕಿರೀಟ ಮತ್ತು ಲಾಂಗ್ ಉಡುಗೊರೆ ನೀಡಿದ್ದಾರೆ. ಬಳಿಕ ಅಭಿಮಾನಿಗಳು ಕೊಟ್ಟ ಲಾಂಗ್ ಅನ್ನು ದರ್ಶನ್‌ ಹಿಡಿದಿದ್ದು ಫೋಟೋಗೆ ಪೋಸ್‌ ಕೊಟ್ಟಿದ್ದಾರೆ. ನಟ ಲಾಂಗ್ ಹಿಡಿದಿರುವುದು ಹಾಗೂ ಅಭಿಷೇಕ್‌ ಬೆಳ್ಳಿ ಕಿರೀಟ ಧರಿಸಿರುವುದು ಫೋಟೋದಲ್ಲಿ ಸೆರೆಯಾಗಿದ್ದು ವೈರಲ್‌ ಆಗಿದೆ.  ಇತ್ತೀಚೆಗಷ್ಟೇ ನಟ ದರ್ಶನ್‌ ಮನೆಯ ನಾಯಿ ಮಹಿಳೆಗೆ ಕಚ್ಚಿದ್ದ ವಿವಾದದಲ್ಲಿ ನಟ ಪೊಲೀಸ್‌ ಠಾಣೆಗೆಹಾಜರಾಗಿದ್ದರು. ಈಗ ಮತ್ತೊಮ್ಮೆ ಸಾರ್ವಜನಿಕವಾಗಿ ಲಾಂಗ್ ಹಿಡಿದು ವಿವಾದಕ್ಕೆ ಸಿಲುಕಿದ್ದಾರೆ.

Loading

Leave a Reply

Your email address will not be published. Required fields are marked *