ಕೋಲಾರ: ಕೋಲಾರ ನಗರದಲ್ಲಿ ಮತ್ತೊಂದು ಭೀಕರ ಕೊಲೆಯಾಗಿದ್ದು 17 ವರ್ಷದ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕಾರ್ತಿಕ್ ಸಿಂಗ್ (17) ಕೊಲೆಯಾದ ಬಾಲಕನಾಗಿದ್ದು ಸರ್ಕಾರಿ ಶಾಲೆಯ ಆವರಣದಲ್ಲೇ ಬರ್ಬರವಾಗಿ ಕೊಲೆ ಮಾಡಲಾಗಿದ್ದು ನಗರದ ಪೇಟೆಚಾಮನಹಳ್ಳಿ ಬಡಾವಣೆಯಲ್ಲಿ ಘಟನೆ ನಡೆದಿದೆ.ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕ ಯುವಕರ ಗುಂಪಿನಿಂದ ಬಾಲಕನ ಮೈಮೇಲೆ ಲಾಂಗು ಮಚ್ಚುಗಳನ್ನು ಬೀಸಿ ಕೊಲೆ ಮಾಡಿರುವ ಶಂಕೆಯಾಗಿದ್ದು ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.