ಜೂಲಾಜಿಕಲ್ ಪಾರ್ಕ್’ಗೆ ಮತ್ತೊಂದು ಜಿರಾಫೆ ಎಂಟ್ರಿ

ವಿಜಯನಗರ: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಅಟಲ್‌ಬಿಹಾರಿ ವಾಜಪೇಯಿ ಜೂಲಾಜಿ ಕಲ್‌ ಪಾರ್ಕ್‌ಗೆ ಮತ್ತೊಂದು ಜಿರಾಫೆ ಆಗಮನವಾಗಿದೆ. ಕಳೆದ ವರ್ಷ ಹಂಪಿ ಉತ್ಸವದ ವೇಳೆಗೆ ಬಿಹಾರದ ಪಾಟ್ನಾದಿಂದ ಹೆಣ್ಣು ಜಿರಾಫೆ ತರಲಾಗಿತ್ತು. ಈಗ ಮೈಸೂರು ಮೃಗಾಲಯದಿಂದ ಗಂಡು ಜಿರಾಫೆ ಅತಿಥಿಯಾಗಿ ಬಂದಿದೆ. ಈ ಬಾರಿ ಹಂಪಿ ಉತ್ಸವ ಕಳೆಗಟ್ಟಿಸಲು ಜಿರಾಫೆ ಆಗಮನವಾಗಿದೆ.

ಈ ಜೋಡಿ ಜಿರಾಫೆಗಳು ಈಗ ಮಗಾಲಯದಲ್ಲಿ ಆಕರ್ಷಣೆ ಕೇಂದ್ರವಾಗಿವೆ. ಶಂಕರ್ ಎಂಬ ಗಂಡು ಜಿರಾಫೆ ಮೂರು ವರ್ಷದ್ದಾಗಿದ್ದು, ಮೈಸೂರು ಮೃಗಾಲಯದಿಂದ ತರಲಾಗಿದೆ. ಪಾಟ್ನಾದಿಂದ ತಂದಿರುವ ಹೆಣ್ಣು ಜಿರಾಫೆ ನಾಲ್ಕು ವರ್ಷದ್ದಾಗಿದೆ. ಈಗ ಜಿರಾಫೆ ಜೋಡಿಗಳು ಕೇಂದ್ರ ಬಿಂದುವಾಗಿವೆ. ಈಗಾಗಲೇ ವಿವಿಧ ಪ್ರಾಣಿ, ಪಕ್ಷಿಗಳನ್ನು ಹೊಂದಿರುವ ಮೃಗಾಲಯ, ಪ್ರವಾಸಿಗರನ್ನು ಸೆಳೆಯುತ್ತಿದೆ.

Loading

Leave a Reply

Your email address will not be published. Required fields are marked *