ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ: ಅಗರಬತ್ತಿ ಫ್ಯಾಕ್ಟರಿಗೆ ಬಿದ್ದ ಬೆಂಕಿ

ಬೆಂಗಳೂರು: ಅತ್ತಿಬೆಲೆಯಲ್ಲಿ ಪಾಟಕಿ ಗೋಡೌನ್ನಲ್ಲಿ ನಡೆದ ಅಗ್ನಿ ದುರಂತದ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಪೈಪ್ಲೈನ್ ರಸ್ತೆಯ ಚೋಳರಪಾಳ್ಯದಲ್ಲಿ ಇರುವ ಅಗರಬತ್ತಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ರವಿಕುಮಾರ್ ಎಂಬುವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚೋಳರಪಾಳ್ಯದ ಮನೆಗಳಿರುವ ಪ್ರದೇಶದಲ್ಲಿ ಗುಡಿಕೈಗಾರಿಕೆ ರೀತಿ ಕಳೆದ ಐದು ವರ್ಷಗಳಿಂದ ಮನೆಯಲ್ಲೇ ಅಗರಬತ್ತಿ ಕಾರ್ಖಾನೆ ನಡೆಲಾಗುತ್ತಿದೆ. ಮನೆಯಲ್ಲಿ ಕಾರ್ಖಾನೆ ನಡೆಸುತ್ತಿರುವುದರಿಂದಾಗಿ ಗ್ರೌಂಡ್ ಫ್ಲೋರ್ನಲ್ಲಿ ಅಗರಬತ್ತಿ ತಯಾರಿಕೆಗೆ ಬೇಕಾಗಿದ್ದ ಲಿಕ್ವಿಡ್ ರಾಸಾಯನಿಕಗಳನ್ನು ಶೇಕರಿಸಿಡಲಾಗಿತ್ತು.
ಆದರೆ, ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿಯಿಂದಾಗಿ ಲಿಕ್ವಿಡ್ ರಾಸಾಯನಿಕಗಳಿದ್ದ ಕ್ಯಾನ್ಗಳು ಬ್ಲಾಸ್ಟ್ ಆಗಿ ರಾಸಾಯನಿಕ ರಸ್ತೆಗೆ ಹರಿದಿದೆ. ಪರಿಣಾಮ ರಸ್ತೆಗೂ ಬೆಂಕಿ ಆವರಿಸಿದ್ದು, ಮನೆ ಮುಂದೆ ನಿಲ್ಲಿಸಿದ್ದ ಎಂಟು ಬೈಕ್ಗಳು ಸುಟ್ಟು ಭಸ್ಮವಾಗಿವೆ.

Loading

Leave a Reply

Your email address will not be published. Required fields are marked *