ಅಮೃತಸರ : ಪಂಜಾಬ್ ನ ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ತಡರಾತ್ರಿ ಮತ್ತೊಂದು ಕಚ್ಚಾ ಬಾಂಬ್ ಸ್ಪೋಟವಾಗಿದೆ, ಇದು ಕಳೆದ ಕೆಲವು ದಿನಗಳಲ್ಲಿ ಮೂರನೆಯದಾಗಿದೆ. ಅಮೃತಸರದ ಗೋಲ್ಡನ್ ಟೆಂಪಲ್ ಬಳಿಯ ಶ್ರೀ ಗುರು ರಾಮದಾಸ್ ಜಿ ನಿವಾಸದ ಬಳಿ ಬಾಂಬ್ ಸ್ಪೋಟಗೊಂಡಿದೆ ಎಂದು ವರದಿಯಾಗಿದೆ.
ಏಳು ದಿನಗಳಲ್ಲಿ ಇದು ಮೂರನೇ ಶಂಕಿತ ಸ್ಫೋಟವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಮೃತಸರದ ಗೋಲ್ಡನ್ ಟೆಂಪಲ್ ಬಳಿಯ ಹೆರಿಟೇಜ್ ಸ್ಟ್ರೀಟ್ನಲ್ಲಿ ಶನಿವಾರ (ಮೇ 6) ಮತ್ತು ಸೋಮವಾರ (ಮೇ 8) ಎರಡು ಸ್ಫೋಟಗಳು ಸಂಭವಿಸಿದ ನಂತರ ಹೊಸ ಸ್ಫೋಟ ಸಂಭವಿಸಿದೆ.
ಅಮೃತಸರದಲ್ಲಿ ಕಡಿಮೆ ತೀವ್ರತೆಯ ಸ್ಫೋಟ ಪ್ರಕರಣಗಳನ್ನು ಪರಿಹರಿಸಲಾಗಿದೆ ಮತ್ತು ಐವರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸ್ ಡಿಜಿಪಿ ಗುರುವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ. ಈ ಕುರಿತು ಇಂದು ಅಮೃತಸರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗುವುದು ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.