ಇತ್ತೀಚೆಗೆ ಪರಭಾಷೆಯ ನಟಿಯರು ಕನ್ನಡ ಚಿತ್ರರಂಗದತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ನಟಿಯರು ಗಾಂಧಿನಗರಕ್ಕೆ ಆಗಮಿಸಿದ್ದು ಇದೀಗ ಮತ್ತೊಬ್ಬ ಬಾಲಿವುಡ್ ನಟಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ.
ಕನ್ನಡದ ‘ರೆಡ್ರಮ್’ ಸಿನಿಮಾದ ಮೂಲಕ ಮುಂಬೈ ಪ್ರತಿಭೆ ಪ್ರಾಚಿ ಶರ್ಮಾ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.
ತೆಲುಗಿನ ‘ಜಿಲ್ಲಾ ಪರಿಷತ್ ಉನ್ನತ ಪಾಠಶಾಲಾ’ ಚಿತ್ರದ ಮೂಲಕ ಬಣ್ಣ ಹಚ್ಚಿದ ಅನುಭವವಿರುವ ಪ್ರಾಚಿ ಶರ್ಮಾ ಇದೀಗ ಈಗ ಕೌಟಿಲ್ಯ ಸಿನಿಮಾಸ್ ಹಾಗೂ ಹನಿ ಚೌಧರಿ ನಿರ್ಮಾಣದ ರೆಡ್ರಮ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೊಂದು ಮಹತ್ವದ ಪಾತ್ರವಾಗಿದೆ ಎಂದು ನಿರ್ಮಾಣ ಸಂಸ್ಥೆ ಮಾಹಿತಿ ಹಂಚಿಕೊಂಡಿದೆ.
ಕನ್ನಡ ಭಾಷೆಯನ್ನು ಬೇಗ ಕಲಿಯುತ್ತಿರುವ ಪ್ರಾಚಿ ಶರ್ಮಾ, ಆಗಲೇ ಸ್ವಾತಿ ನಕ್ಷತ್ರ ಎಂಬ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಜುಲೈನಲ್ಲಿ ಆರಂಭವಾಗಲಿದೆ. ಇದಲ್ಲದೆ ಇನ್ನೊಂದು ಹೆಸರಿಡದ ಬಹು ತಾರಾಗಣದ, ಬಿಗ್ ಬಜೆಟ್ ನ ಚಿತ್ರಕ್ಕೂ ಪ್ರಾಚಿ ಶರ್ಮಾ ಆಯ್ಕೆ ಆಗಿದ್ದಾರೆ. ಹಲವು ಚಿತ್ರಗಳಿಗೆ ಮಾತುಕತೆ ನಡೆಯುತ್ತಿದ್ದು ಸದ್ಯದಲ್ಲೇ ಎಲ್ಲವೂ ಫೈನಲ್ ಆಗಲಿದೆ ಎಂದು ನಟಿ ಪ್ರಾಚಿ ಶರ್ಮಾ ತಿಳಿಸಿದ್ದಾರೆ.