ಬೆಳಗಾವಿಯ ಬೆತ್ತಲೆ ಕೇಸ್ ಮಾಸುವ ಮುನ್ನವೆ ಮತ್ತೊಂದು ಅನಾಗರಿಕ ಘಟನೆ

ಹಾವೇರಿ: ಯುವಕ-ಯುವತಿ ಪ್ರೇಮ ಪ್ರಕರಣದಲ್ಲಿ ಮುದೇನೂರು ಗ್ರಾಮ ಪಂಚಾಯತಿ ಸದಸ್ಯನನ್ನು ಅರೇ ಬೆತ್ತಲೆಗೊಳಿಸಿದ ಘಟನೆ ಹಾವೇರಿ ಜಿಲ್ಲೆಯ ಮುದೇನೂರು ಗ್ರಾಮದಲ್ಲಿ ನಡೆದಿದೆ. ಹಲವು ವರ್ಷಗಳಿಂದ ಮಾದಿಗ ಸಮುದಾಯದ ಯುವಕ ಪ್ರಕಾಶ್ 28, ಮಾದಿಗ ಸಮುದಾಯದ ಸಂಗೀತಾ 22 ಪ್ರೀತಿಸುತ್ತಿದ್ದರು. ಇದೀಗ ನಾಲ್ಕೈದು ದಿನಗಳ ಹಿಂದೆ ಪ್ರೇಮಿಗಳು ಮನೆ ಬಿಟ್ಟು ಓಡಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ  ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ಹುಡುಗಿ ಮನೆಯವರು ಸಿಟ್ಟಿಗೆದ್ದು,ಮುದೇನೂರು ಗ್ರಾಮದಲ್ಲಿನ ಹುಡುಗನ ಅಕ್ಕನ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ.

ಮಾದಿಗ ಸಮುದಾಯದ ಗ್ರಾಮ ಪಂಚಾಯತಿ ಸದಸ್ಯ ಪ್ರಶಾಂತ್ ಮಣಕೂರು ಅವರನ್ನು ಹೊಡೆದು ಪೋಲಿಸ್ ಠಾಣೆಯ ಮುಂದೆ ಪತ್ನಿಯ ಜೊತೆ ನಿಲ್ಲಿಸಿ ಹೋಗಿದ್ದಾರೆ.ಯುವಕ ಪ್ರಕಾಶ್ ಮಾವನಾಗಿರುವ ಗ್ರಾಮ‌ ಪಂಚಾಯತಿ ಸದಸ್ಯ ಪ್ರಶಾಂತ್ ಮಣಕೂರು ಅವರ ಮೇಲೆ ಶಿವಾಜಿ ಕಮದೋಡು,ಬಸಣ್ಣ ಸೇರಿದಂತೆ 20 ಜನರಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.ಹಲ್ಲೆ ಮಾಡಿದ ಹುಡುಗಿಯ ಮನೆಯವರ ವಿರುದ್ಧ ಗ್ರಾಮ ಪಂಚಾಯತಿ ಸದಸ್ಯ ದೂರು ನೀಡಿದ್ದಾನೆ.ಹಲಗೇರಿ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

 

Loading

Leave a Reply

Your email address will not be published. Required fields are marked *