ಆನಂದಪುರ ಗ್ರಾಮ: ಈಶ್ವರ ದೇವಸ್ಥಾನ ಆವರಣದಲ್ಲಿ ಪುರಾತನ ಆಭರಣ, ನಿಧಿ ಪತ್ತೆ

ಸಿದ್ದಾಪುರ: ಇಲ್ಲಿನ ಆನಂದಪುರ ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಬಳಿ ಪುರಾತನ ಆಭರಣಗಳು ಹಾಗೂ ನಿಧಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ ವಿರಾಜಪೇಟೆ ಸಿದ್ದಾಪುರ ಮಾರ್ಗ ಮಧ್ಯದ ಅಮ್ಮತಿ ಸಮೀಪದ ಮುಖ್ಯ ರಸ್ತೆಯಲ್ಲಿರುವ ಪುರಾತನ ಈಶ್ವರ ದೇವಸ್ಥಾನವು ಟಾಟಾ ಕಾಫಿ ಸಂಸ್ಥೆಗೆ ಸೇರಿದ ಜಾಗದಲ್ಲಿ ದೇವಸ್ಥಾನವಿದ್ದು ತೋಟ ಕಾರ್ಮಿಕರು ಕೆಲಸ ನಿರ್ವಹಿಸುತಿದ್ದ ವೇಳೆ ಭೂಮಿಯಡಿಯಲ್ಲಿ ಕುಡಿಕೆಯಲ್ಲಿ ಆಭರಣಗಳು ಪತ್ತೆಯಾಗಿದೆ ಎಂದು ಹೇಳಲಾಗಿದೆ.

ತೋಟದ ವ್ಯವಸ್ಥಾಪಕರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಸಿದ್ದಾಪುರ ಪೊಲೀಸ್ ಸಬ್ -ಇನ್ಸ್ ಪೆಕ್ಟರ್ ಪಿ.ಎಂ.ರಾಘವೇಂದ್ರ ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಗಳ ತಂಡ ತಹಶಿಲ್ದಾರರ್ ಹಾಗೂ ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಆಭರಣಗಳನ್ನು ಸಂಗ್ರಹಿಸಿ ಮಹಜರು ನಡೆಸಿ ನಿಯಮ ರೀತ್ಯ ಕ್ರಮಗಳ ಬಳಿಕ ಜಿಲ್ಲಾಧಿಕಾರಿಗಳ ವಶಕ್ಕೆ ನೀಡಲಾಯಿತ್ತು.

Loading

Leave a Reply

Your email address will not be published. Required fields are marked *