ಬಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ಸ್ಥಾನಕ್ಕೆ ಆನಂದ್ ಸಿಂಗ್ ರಾಜೀನಾಮೆ

ವಿಜಯನಗರ : ಮಾಜಿ ಸಚಿವ ಆನಂದ ಸಿಂಗ್ (Anand Singh) ರಾಜಕೀಯ ನಿವೃತ್ತಿಯತ್ತ ಹೆಜ್ಜೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಮೂರು ಬಾರಿ ಬಿಜೆಪಿ ಒಮ್ಮೆ ಕಾಂಗ್ರೆಸ್ ನಿಂದ ಗೆದ್ದಿರೋ ಆನಂದ ಸಿಂಗ್ ಗೆ ಮಗ ಸಿದ್ದಾರ್ಥ ಸಿಂಗ್ ಸೋಲು ರಾಜಕೀಯ ನಿರಾಸಕ್ತಿ ಮೂಡಿಸಿದೆಯಾ ಎಂದು ಪ್ರಶ್ನೆ ಮೂಡಿಸಿದೆ.

ಸಾವಿರಾರು ಮತಗಳ ಅಂತರದಿಂದ ಗೆದ್ದಿರೋ ಆನಂದ ಸಿಂಗ್ ಅವರಿಗೆ ಮಗನ ಸೋಲು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕೂಡ ಹೇಳಲಾಗುತ್ತಿದೆ. ಮೊದಲು ಚುನಾವಣೆಯಿಂದ ಹಿಂದೆ ಸರಿದ್ರು.‌

ಇದೀಗ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆನಂದ ಸಿಂಗ್ ರಾಜೀನಾಮೆಯಿಂದ ವಿಜಯನಗರ ಬಳ್ಳಾರಿ ಬಿಜೆಪಿಗೆ ಭಾರಿ ಹೊಡೆತ ಬಿದ್ದಿದೆ. ಆನಂದ್ ಸಿಂಗ್ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಅಯ್ಕೆಯಾಗಿದ್ದರು. ಇನ್ನೂ ಎರಡು ಮೂರು ವರ್ಷಗಳ ಅವಧಿ ಇರುವಾಗಲೇ ಆನಂದ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ. ಲೋಕಸಭೆ ಚುನಾವಣೆ ಸಮೀಪ ಇರುವಾಗಲೇ ಆನಂದ ಸಿಂಗ್ ರಾಜೀನಾಮೆ ದೊಡ್ಡ ಸಂಚಲನ ಮೂಡಿಸಿದೆ.

Loading

Leave a Reply

Your email address will not be published. Required fields are marked *