ಚಂದ್ರನ ಕಾರ್ಯಾಚರಣೆಗೆ ಹೊರಟ ಅಮೇರಿಕಾದ ʼʼಕೆನವೆರಲ್ ಲ್ಯಾಂಡರ್ʼʼ..!

ಕೇಪ್ ಕೆನವೆರಲ್: ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಖಾಸಗಿ ಕಂಪನಿಯೊಂದರ ಲ್ಯಾಂಡರ್, ಚಂದ್ರನ ಮೇಲೆ ಲ್ಯಾಂಡ್ ಆಗುವ ನಿರೀಕ್ಷೆಯಿದೆ. ಈ ಯೋಜನೆಯನ್ನು ನಾಸಾ ಕೈಗೊಂಡಿದ್ದು, ಕೆನವೆರಲ್ ಲ್ಯಾಂಡರ್ ಹೊತ್ತ ರಾಕೆಟ್ ಉಡಾವಣೆಗೊಂಡಿದೆ. ಈವರೆಗೆ ಸರ್ಕಾರಿ ಸಂಸ್ಥೆಗಳು ಮಾತ್ರ ಚಂದ್ರನ ಮೇಲೆ ತಮ್ಮ ಲ್ಯಾಂಡರ್‌ಗಳನ್ನು ಇಳಿಸಿದ್ದವು.

ಆದರೆ ನಾಸಾ, ಈ ಯೋಜನೆಯನ್ನು ಖಾಸಗಿಯವರಿಗೂ ವಿಸ್ತರಿಸಿದೆ. ಈ ಲ್ಯಾಂಡರನ್ನು ಪಿಟ್ಸ್‌ಬರ್ಗ್‌ ಮೂಲದ ಆಕ್ಟೋಬೋಟಿಕ್ ಸಂಸ್ಥೆ ತಯಾರಿಸಿದ್ದು, ಇದು ಫೆ.23ರಂದು ಚಂದ್ರನ ನೆಲದ ಮೇಲಿಳಿವ ನಿರೀಕ್ಷೆಯಿದೆ. ಆದರೆ, ಉಡಾವಣೆ ಬಳಿಕಎಂಜಿನ್‌ ಸಮಸ್ಯೆ ಕಾಣಿಸಿಕೊಂಡಿದ್ದು, ವಿಜ್ಞಾನಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 1972ರಲ್ಲಿ ಕೊನೆಯ ಬಾರಿ ನಾಸಾ ಚಂದ್ರಯಾನ ಕೈಗೊಂಡಿತ್ತು. ಇದಾದ 50 ವರ್ಷ ಬಳಿಕ ಮತ್ತೆ ಇಂಥ ಯತ್ನ ನಡೆದಿದೆ.

ಅಮೆರಿಕದ ಈ ಚಂದ್ರಯಾನ ಯೋಜನೆಗೆ ಭಾರತದ ನಂಟಿದೆ. ಲ್ಯಾಂಡರ್ ತಯಾರಿಸಿರುವ ಆಸ್ಫೋಬೋಟಿಕ್‌ ಸಂಸ್ಥೆಯ ನಿರ್ದೇಶಕ ಶರದ್‌ ಭಾಸ್ಕರನ್ ಅವರು ಭಾರತ ಮೂಲದವರಾಗಿದ್ದಾರೆ. ಈ ಯೋಜನೆಗಾಗಿ ಇವರು 7 ವರ್ಷಗಳ ಕಾಲ ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು, ಯೋಜನೆ ಯಶಸ್ವಿಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Loading

Leave a Reply

Your email address will not be published. Required fields are marked *