ಮುಂಬೈ: ಅಯೋಧ್ಯೆಯಲ್ಲಿ (Ayodhya) ರಾಮೋತ್ಸವದ ಸಂಭ್ರಮಕ್ಕೆ ಇಡೀ ಭಾರತವೇ ಸಾಕ್ಷಿಯಾಗಲಿದೆ. ಜನವರಿ 22ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಕಾತುರದಿಂದ ಕಾಯುತ್ತಿದ್ದಾರೆ ಹಾಗೆ ಹಲವಾರು ಪ್ರಸಿದ್ದಿ ಪಡೆದ ನಾಯಕರಿಗೆ ಆಹ್ವಾನ ಕೂಡ ನೀಡಲಾಗಿದೆ. ಆದರೆ ಡಾ.ಬಿ.ಆರ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಇದರ ಬಗ್ಗೆ ಈಗ ತಕರಾರು ಎತ್ತಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ನನಗೆ ಆಹ್ವಾನ ಬಂದಿತ್ತು ಆದರೆ ನಾನು ಮಾತ್ರ ಹೋಗುತ್ತಿಲ್ಲ ಎಂದು ಕೆಲ ಕಾರಣ ಕಾರಣಗಳನ್ನು ಕೊಟ್ಟು ಆಹ್ವಾನವನ್ನು ತಿರಸ್ಕಾರ ಮಾಡಿದ್ದಾರೆ.
ಈ ಕಾರ್ಯಕ್ರಮವನ್ನು ಬಿಜೆಪಿ-ಆರ್‌ಎಸ್‌ಎಸ್ ಸ್ವಾಧೀನಪಡಿಸಿಕೊಂಡಿರುವುದರಿಂದ ನಾನು ಈ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ; ಧಾರ್ಮಿಕ ಕಾರ್ಯಕ್ರಮವು ಚುನಾವಣಾ ಲಾಭಕ್ಕಾಗಿ ರಾಜಕೀಯ ಪ್ರಚಾರವಾಗಿದೆ.
ನನ್ನ ತಾತ ಡಾ.ಬಿ.ಆರ್. ಅಂಬೇಡ್ಕರ್ ಅವರು “ಪಕ್ಷಗಳು ಧರ್ಮವನ್ನು ದೇಶಕ್ಕಿಂತ ಹೆಚ್ಚಾಗಿ ಇರಿಸಿದರೆ, ನಮ್ಮ ಸ್ವಾತಂತ್ರ್ಯವು ಎರಡನೇ ಬಾರಿಗೆ ಅಪಾಯಕ್ಕೆ ಸಿಲುಕುತ್ತದೆ ಮತ್ತು ಬಹುಶಃ ಶಾಶ್ವತವಾಗಿ ಕಳೆದುಹೋಗುತ್ತದೆ” ಎಂದು ಎಚ್ಚರಿಸಿದರು. ನನ್ನ ಅಜ್ಜನ ಭಯ ಇಂದು ನಿಜವಾಗಿದೆ. “ದೇಶದ ಮೇಲೆ ನಂಬಿಕೆ ಇಡುವ” ಬಿಜೆಪಿ-ಆರ್‌ಎಸ್‌ಎಸ್ ತನ್ನ ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಕಾರ್ಯಕ್ರಮವನ್ನು ತನ್ನದಾಗಿಸಿಕೊಂಡಿದೆ ಎಂದು ಕಿಡಿ ಕಾರಿದರು,