ಚಾಮುಂಡೇಶ್ವರಿ ದೇವಾಲಯಕ್ಕೆ ಹಸ್ತಾಂತರಗೊಂಡ ಅಂಬಾರಿ ವಿಗ್ರಹ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಕೊನೆಯ ದಿನ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಚಿನ್ನದ ಅಂಬಾರಿಯಲ್ಲಿನ ಚಾಮುಂಡೇಶ್ವರಿ ಮೂರ್ತಿಯನ್ನು ಇಂದು ಅರಮನೆಯ ಖಜಾನೆಯಿಂದ ಚಾಮುಂಡಿ ಬೆಟ್ಟಕ್ಕೆ ರವಾನಿಸಲಾಯಿತು.

ಅಂಬಾರಿ ಮೆರವಣಿಗೆ ಮುಕ್ತಾಯದ ಬಳಿಕ ಜಿಲ್ಲಾಡಳಿತ ಈ ಚಾಮುಂಡೇಶ್ವರಿ ಮೂರ್ತಿಯನ್ನು ರಾಜವಂಶಸ್ಥರ ಸುಪರ್ದಿಗೆ ನೀಡಲಾಗಿರುತ್ತದೆ. ಇಂದು ರತ್ನ ಖಚಿತ ಸಿಂಹಾಸನವನ್ಜು ಖಜಾನೆಯಿಂದ ಹೊರ ತಂದ ಸಂದರ್ಭದಲ್ಲೇ ಚಾಮುಂಡೇಶ್ವರಿ ಮೂರ್ತಿಯನ್ನು ಜಿಲ್ಲಾಡಳಿತದ ವಶಕ್ಕೆ ಕೊಡಲಾಯಿತು. ಮೂರ್ತಿಯನ್ನು ಶುಚಿಗೊಳಿಸಿದ ಬಳಿಕ ಮೆರವಣಿಗೆಗಾಗಿ ತರಲಾಗುತ್ತದೆ.

Loading

Leave a Reply

Your email address will not be published. Required fields are marked *