ಅಯೋಧ್ಯೆ: ರಾಮಮಂದಿರದಲ್ಲಿ ನಡೆದ ರಾಮಲಲ್ಲಾ (Ram Lalla) ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಾಲರಾಮನ ದರ್ಶನ ಪಡೆದ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಮಮಂದಿರದ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ನಿರ್ವಿಘ್ನವಾಗಿ ನೇರವೇರಿದೆ. ಈ ಐತಿಹಾಸಿಕ ಕ್ಷಣಕ್ಕೆ ಪ್ರಮುಖ ನಾಯಕರು ಸೇರಿದಂತೆ ಗಣ್ಯಾತಿಗಣ್ಯರು ಭಾಗಿಯಾಗುವ ಮೂಲಕ ಬಾಲರಾಮನ ಪ್ರಾಣಪ್ರತಿಷ್ಠೆಯನ್ನು ಕಣ್ತುಂಬಿಕೊಂಡರು. ಈ ಕಾರ್ಯಕ್ರಮದಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದಲ್ಲದೇ ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಮುಕೇಶ್ ಅಂಬಾನಿ ದೇಣಿಗೆ ನೀಡಿರುವ ಕುರಿತು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಮಗಳು ಇಶಾ ಮತ್ತು ಅಳಿಯ ಆನಂದ್ ಪಿರಾಮಲ್, ಪುತ್ರರಾದ ಆಕಾಶ್ ಮತ್ತು ಅನಂತ್, ಸೊಸೆ ಶ್ಲೋಕಾ ಮೆಹ್ತಾ ಮತ್ತು ರಾಧಿಕಾ ಮರ್ಚೆಂಟ್ ಭಾಗಿಯಾಗಿದ್ದರು.