Amala Paul: ನೆಚ್ಚಿನ ಹುಡುಗನ ಜೊತೆ 2ನೇ ಮದುವೆಯಾದ ಅಮಲಾ ಪೌಲ್..!

ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅಮಲಾ ಪೌಲ್ ಸದ್ದಿಲ್ಲದೇ 2ನೇ ಮದುವೆಯಾಗಿದ್ದಾರೆ (Marriage). ಹತ್ತು ದಿನಗಳ ಹಿಂದೆಯಷ್ಟೇ ಅವರಿಗೆ ಪ್ರೀತಿಸುತ್ತಿದ್ದ ಹುಡುಗ ಲವ್ ಪ್ರಪೋಸ್ ಮಾಡಿದ್ದ. ಇದಾದ ಒಂದೂವರೆ ವಾರಗಳ ಅಂತರದಲ್ಲಿ ನೆಚ್ಚಿನ ಹುಡುಗನ ಜೊತೆ ಮದುವೆ ಆಗಿದ್ದಾರೆ. ಅಮಲಾ. ನಿನ್ನೆ ಕೊಚ್ಚಿಯಲ್ಲಿ (Kochi) ಅಮಲಾ ಪೌಲ್ ಅವರ ಜಗತ್ ದೇಸಾಯಿ ಅವರ ಜೊತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಮಲಾ ಪೌಲ್ (Amala Paul) ವಿಭಿನ್ನವಾಗಿ ಮದುವೆಯ ಪ್ರಪೋಸಲ್ ಅನ್ನು ಸ್ವೀಕರಿಸಿದ್ದರು. ಅಮಲಾ ಅವರ ಹುಟ್ಟು ಹಬ್ಬದ ದಿನದಂದೇ ಬಾಯ್ ಫ್ರೆಂಡ್ ವಿಶೇಷವಾದ ಸನ್ನಿವೇಶವೊಂದನ್ನು ಸೃಷ್ಟಿ ಮಾಡಿ ಅಮಲಾ ಕೈಗೆ ಉಂಗುರು ತೊಡಿಸಿದ್ದರು.

ದಕ್ಷಿಣ ಭಾರತದ ಖ್ಯಾತಿ ನಟಿ ಆಗಿರುವ ಅಮಲಾ ಪೌಲ್, ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿ ಆದವರು. ಆದರೂ, ಅವರ ಡಿಮಾಂಡ್ ಕಡಿಮೆ ಆಗಿರಲಿಲ್ಲ. ಒಂದಲ್ಲ ಒಂದು ಸಿನಿಮಾಗಳಲ್ಲಿ ನಟಿಸುತ್ತಲೇ ಬಂದರು. 2014ರಲ್ಲಿ ತಮಿಳು ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ, ಆ ಸಂಬಂಧ ತುಂಬಾ ದಿನ ಉಳಿಯಲಿಲ್ಲ. ಮದುವೆಯಾದ ಮೂರೇ ಮೂರು ವರ್ಷಕ್ಕೆ ಜೀವನ ಮುರಿದು ಬಿತ್ತು.

ಆನಂತರ ಈ ನಟಿಯ ಹೆಸರು ಹಲವಾರು ನಟರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ಅನೇಕ ನಿರ್ದೇಶಕರ ಹೆಸರು ಕೂಡ ಕೇಳಿ ಬಂದಿತ್ತು. ಆದರೆ, ಯಾವತ್ತೂ ಅಮಲಾ ಉತ್ತರಿಸಲಿಲ್ಲ. ಇದೀಗ ಬಾಯ್ ಫ್ರೆಂಡ್ ಜೊತೆಗಿನ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಬಾಯ್ ಫ್ರೆಂಡ್ ಮಾಡಿರೋ ಪ್ರಪೋಸ್‍ಗೆ ಒಪ್ಪಿಕೊಂಡಿದ್ದರು

 

Loading

Leave a Reply

Your email address will not be published. Required fields are marked *