ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟ ಜ್ಯೂ ಎನ್ ಟಿ ಆರ್ ಗೆ ಸಖತ್ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಗ್ಲೋಬಲ್ ಸ್ಟಾರ್ ಆಗಿ ಮಿಂಚುತ್ತಿರುವ ಜೂನಿಯರ್ ಎನ್ ಟಿ ಆರ್ ಸದ್ಯ ‘ದೇವರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ‘ದೇವರ’ ಸಿನಿಮಾಗೆ ಸ್ಟಾರ್ ನಟ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಎಂಟ್ರಿ ಕೊಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ದೇವರ ಸಿನಿಮಾದಲ್ಲಿ ಸ್ಟಾರ್ ನಟರ ದಂಡೇ ಕಾಣಿಸಿಕೊಂಡಿದೆ. ಜೂನಿಯರ್ ಎನ್ ಟಿ ಆರ್ ಗೆ ಇದೇ ಮೊದಲ ಭಾರಿಗೆ ನಟಿ ಜಾನ್ವಿ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಇನ್ನೂ ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಸೈಫ್ಗೆ ಪತ್ನಿಯಾಗಿ ಕನ್ನಡದ ನಟಿ ಚೈತ್ರಾ ರೈ ನಟಿಸುತ್ತಿದ್ದಾರೆ.
‘ದೇವರ’ ಸಿನಿಮಾದಲ್ಲಿ ಜ್ಯೂ.ಎನ್ಟಿಆರ್ ಡಬಲ್ ಶೇಡ್ನಲ್ಲಿ ನಟಿಸುತ್ತಿದ್ದು, ನಟನ ಮಗಳ ಪಾತ್ರದಲ್ಲಿ ಅಲ್ಲು ಅರ್ಹಾ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ಅರ್ಹಾಗೆ ನಟನೆಗೆ ಅವಕಾಶ ಕಮ್ಮಿ ಇದ್ರೂ ಆಕೆಯ ಪಾತ್ರಕ್ಕೆ ಪ್ರಾಮುಖ್ಯತೆಯಿದೆ. ಹಾಗಾಗಿ ಸಿನಿಮಾಗೆ ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರಂತೆ. 2-3 ದಿನಗಳ ಕಾಲ ಶೂಟಿಂಗ್ಗೆ 20 ಲಕ್ಷ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಸಮಂತಾ ನಟನೆಯ ‘ಶಾಕುಂತಲಂ’ ಸಿನಿಮಾಗೂ ಅರ್ಹಾ ದುಬಾರಿ ಸಂಭಾವನೆ ಪಡೆದಿದ್ದರು. ಇದೀಗ ಮತ್ತೆ ಜೂನಿಯರ್ ಎನ್ ಟಿ ಆರ್ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಟಾರ್ ಕಿಡ್ ಸದ್ದು ಮಾಡ್ತಿದ್ದಾಳೆ. ಆದ್ರೆ ಆರ್ಹಾ ನಟನೆಯ ಕುರಿತು ಚಿತ್ರತಂಡ ಯಾವುದೇ ಸ್ಪಷ್ಟನೆ ನೀಡಿಲ್ಲ.