ಪುಷ್ಪ ಸಿನಿಮಾ ಶೂಟಿಂಗ್ ಸೆಟ್ ನಿಂದ ಅಲ್ಲು ಅರ್ಜುನ್ ಅವರ ಫೋಟೋವೊಂದು ಲೀಕ್ (Photo Leak) ಆಗಿದ್ದು, ಈ ಕೃತ್ಯ ಮಾಡಿದವರ ವಿರುದ್ಧ ಚಿತ್ರತಂಡ ಗರಂ ಆಗಿದೆ. ಅಲ್ಲು ಅರ್ಜುನ್ ಅವರು ಸೀರೆ ತೊಟ್ಟು ಶೂಟಿಂಗ್ ಗಾಗಿ ಕಾಯುತ್ತಿರುವ ಫೋಟೋ ಅದಾಗಿದ್ದು, ಸಿನಿಮಾದ ಪ್ರಮುಖ ದೃಶ್ಯದಲ್ಲಿ ಅವರು ಆ ರೀತಿ ಕಾಣಲಿದ್ದಾರಂತೆ.
ಅದೇ ಫೋಟೋ ಇದೀಗ ಲೀಕ್ ಆಗಿ ಗುಟ್ಟು ರಟ್ಟು ಮಾಡಿದೆ.
ಈ ನಡುವೆ ಪುಷ್ಪ-2 ಬಿಡುಗಡೆ ಕುರಿತಂತೆ ಮತ್ತೊಂದು ಸ್ಪಷ್ಟನೆ ಬಂದಿದೆ. ಅಲ್ಲಿಗೆ ನಿಗದಿತ ದಿನಾಂಕದಂದೆ ಸಿನಿಮಾ ರಿಲೀಸ್ (Released) ಆಗುವುದು ಫಿಕ್ಸ್ ಆಗಿದೆ. ನಿನ್ನೆಯಷ್ಟೇ ನಿರ್ಮಾಣ ಸಂಸ್ಥೆಯು ಪೋಸ್ಟರ್ ಹಂಚಿಕೊಂಡಿದ್ದು, ಪುಷ್ಪ 2 ಸಿನಿಮಾ ರಿಲೀಸ್ ಗೆ 200 ದಿನವಷ್ಟೇ ಬಾಕಿ ಎಂದು ಬರೆದಿತ್ತು. ಈ ಹಿಂದೆ ಸ್ವಾತಂತ್ರ್ಯ ದಿನದಂದು ಅಂದರೆ ಆಗಸ್ಟ್ 15ರಂದು ವಿಶ್ವಾದ್ಯಂತ ಚಿತ್ರ ತೆರೆಗೆ ಬರಲಿದೆ ಎಂದು ಸ್ಪೆಷಲ್ ಪೋಸ್ಟರ್ ಮೂಲಕ ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿತ್ತು. ಫ್ಯಾನ್ಸ್ ಪುಷ್ಪ ಸೀಕ್ವೆಲ್ ನೋಡೋದಿಕ್ಕೆ ಎಕ್ಸೈಟ್ ಆಗಿದ್ದರು. ಇದೀಗ ರಿಲೀಸ್ ಡೇಟ್ ಮುಂದೆ ಹೋಗಿದೆ ಎಂದು ಸುದ್ದಿಯನ್ನು ಹರಿಬಿಡಲಾಗಿದೆ. ಅಂದು ಜ್ಯೂನಿಯರ್ ಎನ್.ಟಿ.ಆರ್ ನಟನೆಯ ದೇವರ ಸಿನಿಮಾ ಬರಲಿರುವ ಕಾರಣ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ ಅಂತ ಸುದ್ದಿ ಆಗಿತ್ತು.
ಇಂಥದ್ದೊಂದು ಸುದ್ದಿ ಆದ ಬೆನ್ನಲ್ಲೇ ಸಿನಿಮಾ ತಂಡದಿಂದ ಸ್ಪಷ್ಟನೆ ಬಂದಿದೆ. ಯಾವುದೇ ಕಾರಣಕ್ಕೂ ರಿಲೀಸ್ ಡೇಟ್ ಮುಂದಕ್ಕೆ ಹಾಕಲ್ಲ ಅಂದಿದ್ದಾರೆ ನಿರ್ದೇಶಕರು. ಘೋಷಣೆ ಮಾಡಿದ ದಿನದಂದೇ ಚಿತ್ರವನ್ನು ರಿಲೀಸ್ ಮಾಡುವುದಾಗಿ ಹೇಳಿದ್ದಾರೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊರಬಿದ್ದಿದ್ದ ಪುಷ್ಪ-2 ಟೀಸರ್ ಝಲಕ್ ಹಲ್ ಚಲ್ ಎಬ್ಬಿಸಿತ್ತು. ಪುಷ್ಪ 2 ಟೀಸರ್ ಜೊತೆ ಹೊರಬಿದ್ದಿದ್ದ ಪುಷ್ಪರಾಜನ ಹೊಸ ಫೋಟೋವಂತೂ ಟಾಕ್ ಆಫ್ ದಿ ಟಾಲಿವುಡ್ ಆಗಿತ್ತು. ಸೀರೆ ತೊಟ್ಟು ಬಳೆ ತೊಟ್ಟು ಮೂಗುತಿ ಧರಿಸಿ ಕೈಯಲ್ಲಿ ಪಿಸ್ತೂಲ್ ಹಿಡಿದು ದರ್ಶನ ಕೊಟ್ಟಿದ್ದ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅವತಾರಕ್ಕೆ ಫ್ಯಾನ್ಸ್ ಉಘೇ ಉಘೇ ಎಂದಿದ್ದರು. ಶೂಟಿಂಗ್ ಹಂತದಲ್ಲಿರುವ ಪುಷ್ಪ ಸೀಕ್ವೆಲ್ ಕ್ರೇಜ್‌ಗೆ ಬಾಲಿವುಡ್ ಮಂದಿ ಥಂಡಾ ಹೊಡೆದಿದ್ದಾರೆ.