114 ಕುಟುಂಬಗಳಿಗೆ ಸಾಗುವಳಿ ಭೂಮಿ ಮಂಜೂರು: ಹಕ್ಕುಪತ್ರ ವಿತರಣೆ

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೂತಾನಹಳಿ ಗ್ರಾಮದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಸುಮಾರು 60 ವರ್ಷಗಳಿಂದ ವಾಸವಾಗಿದ್ದ ಬುಡಕಟ್ಟು ಜನಾಂಗದ ಇರುಳಿಗರು ಹಾಗೂ ಹಕ್ಕಿಪಿಕ್ಕಿ ಜನಾಂಗದವರಿಗೆ ಸಾಗುವಳಿ ಭೂಮಿಗೆ ಕಾನೂನಾತ್ಮಕವಾಗಿ ಜಾಗ ಸಿಕ್ಕಿರಲಿಲ್ಲ, ಈ ಬುಡಕಟ್ಟು ಜನಾಂಗದವರಿಗೆ ನ್ಯಾ ಒದಗಿಸಿಕೊಡಲು ಮಾನ್ಯ ಸಂಸದರಾದ ಶ್ರೀ ಡಿ.ಕೆ.ಸುರೇಶ್ ರವರು ಸುಮಾರು ಎಂಟು ವರ್ಷಗಳಿಂದ ಸರ್ಕಾರದ ವಿವಿಧ ಇಲಾಖೆಯ ಸಚಿವರುಗಳು,

ಅಧಿಕಾರಿಗಳೊಂದಿಗೆ ಅನೇಕ ಸಭೆಗಳನ್ನು ನಡೆಸಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳೊಂದಿಗೆ ಚರ್ಚಿಸಿ ಅನೇಕ ವರ್ಷಗಳ ಹೋರಾಟದ ಬಳಿಕ  ಈಗ ಅಲ್ಲಿ ವಾಸವಿದ್ದ 114 ಕುಟುಂಬಗಳಿಗೆ ತಲಾ 2 ಎಕರೆ ಸಾಗುವಳಿ ಭೂಮಿಯನ್ನು ಮಂಜೂರು ಮಾಡಿಸಿ ಸಾಗುವಳಿ ಚೀಟಿ, ಪಹಣಿ, ಪೋಡಿ ಮಾಡಿಸಿ ಅಂತರರಾಷ್ಟ್ರೀಯ ಬುಡಕಟ್ಟು  ದಿನಾಚರಣೆಯ ಸಂಧರ್ಭದಲ್ಲಿ  ಹಕ್ಕುಪತ್ರ ವಿತರಿಸಿದರು..

ಈ ಕಾರ್ಯಕ್ರಮದಲ್ಲಿ ರಾಮನಗರ ಶಾಸಕರಾದ ಇಕ್ಬಾಲ್ ಹುಸೇನ್ ರವರು,  ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಜಯಶ್ರೀ ಅಚ್ಯುತ್ ರಾಜ್,  ಬನ್ನೇರುಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷರಾದ BCM ಮಂಜುನಾಥ್ , ಹಾಗೂ ಪಂಚಾಯತಿ ಸದಸ್ಯರುಗಳು, ಅಧಿಕಾರಿಗಳು,  ಹಿರಿಯ ಕಾಂಗ್ರೆಸ್ ಮುಖಂಡರುಗಳು, ಸಾವಿರಾರು ಕಾರ್ಯಕರ್ತರುಗಳು ಉಪಸ್ಥಿತರಿದ್ದರು..

Loading

Leave a Reply

Your email address will not be published. Required fields are marked *