ಅಕ್ರಮ ಹಣ ವರ್ಗಾವಣೆ ಆರೋಪ, ನ್ಯೂಸ್ʼಕ್ಲಿಕ್ ಪತ್ರಕರ್ತರ ಮನೆ ಮೇಲೆ ದೆಹಲಿ ಪೊಲೀಸರಿಂದ ದಾಳಿ

ನವದೆಹಲಿ: ಚೀನಾ (China) ಜೊತೆಗೆ ಆರ್ಥಿಕ ಸಂಬಂಧ ಹೊಂದಿರುವ ಆರೋಪದ ಮೇಲೆ ನ್ಯೂಸ್ಕ್ಲಿಕ್ (NewsClick) ಆನ್ಲೈನ್ ಪೋರ್ಟಲ್ಗೆ (Online Portal) ಸಂಬಂಧಿಸಿದ ಪತ್ರಕರ್ತರು (Journalist) ಮತ್ತು ಉದ್ಯೋಗಿಗಳ ಮನೆಗಳ ಮೇಲೆ ಬೆಳಗ್ಗೆ ದೆಹಲಿ ಪೊಲೀಸರ ವಿಶೇಷ ತಂಡ ದಾಳಿ (Raid) ನಡೆಸಿದೆ. 100ಕ್ಕೂ ಹೆಚ್ಚು ಸ್ಥಳಗಳಲ್ಲಿ 500ಕ್ಕೂ ಹೆಚ್ಚು ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.ಅಕ್ಟೋಬರ್ 2 ರಂದು ದೆಹಲಿ ಪೊಲೀಸ್ (Delhi Police) ವಿಶೇಷ ಕೋಶದ ಹಿರಿಯ ಅಧಿಕಾರಿಗಳ ಸಭೆ ನಡೆದಿದ್ದು, ಪ್ರಕರಣವನ್ನು ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ನಿರ್ಧರಿಸಿತ್ತು. ಅಂತಯೇ ದೆಹಲಿ, ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್ ಮತ್ತು ಮುಂಬೈನ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು.

ಮೂಲಗಳ ಪ್ರಕಾರ ದಾಳಿಗೆ ಒಳಗಾದವರ ಹೆಸರುಗಳನ್ನು ಎ, ಬಿ, ಸಿ ಎಂದು ವರ್ಗಗಳಾಗಿ ವಿಂಗಡಿಸಲಾಗಿತ್ತು. ಎ ವರ್ಗಕ್ಕೆ ಸೇರಿದವರನ್ನು ಬಂಧಿಸಲಾಗಿದೆ. ಬಿ ಮತ್ತು ಸಿ ನ್ಯೂಸ್ ಪೋರ್ಟಲ್ನ ಪತ್ರಕರ್ತರ ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ಗಳಿಂದ ಡೇಟಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನ್ಯೂಸ್ಕ್ಲಿಕ್ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರನ್ನು ವಿಚಾರಣೆಗಾಗಿ ದೆಹಲಿ ಪೊಲೀಸ್ ವಿಶೇಷ ಸೆಲ್ ಕಚೇರಿಗೆ ಕರೆತರಲಾಯಿತು.
ಆಗಸ್ಟ್ 17ರಂದು ಕಟ್ಟುನಿಟ್ಟಾದ ಭಯೋತ್ಪಾದನಾ-ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಾದ ಪ್ರಕರಣವನ್ನು ಆಧರಿಸಿ ದೆಹಲಿಯ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದೆಹಲಿ ಮತ್ತು ನೋಯ್ಡಾ ಮತ್ತು ಗಾಜಿಯಾಬಾದ್ನ ನೆರೆಯ ಪ್ರದೇಶಗಳಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ದಾಳಿ ನಡೆಸಿತು. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆದರೆ ಕೆಲವು ಪತ್ರಕರ್ತರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.

Loading

Leave a Reply

Your email address will not be published. Required fields are marked *