ಸರ್ಕಾರಿ ಭೂಮಿಯಲ್ಲಿ ಬಂಗಲೆ ನಿರ್ಮಾಣ ಆರೋಪ; ಪ್ರಕಾಶ್‌ ರಾಜ್‌ಗೆ ನೋಟಿಸ್‌

ಚೆನ್ನೈ: ಬಂಗಲೆ ನಿರ್ಮಿಸಲು ಕೊಡೈಕೆನಾಲ್‌ನ ವಿಲ್‌ಪಟ್ಟಿ ಪಂಚಾಯತ್‌ನಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ (Encroachment) ಮಾಡಿರುವ ಆರೋಪದ ಮೇಲೆ ನಟ ಪ್ರಕಾಶ್ ರಾಜ್ (Prakash Raj) ಹಾಗೂ ಬಾಬಿ ಸಿಂಹ (Bobby Simha) ಅವರಿಗೆ ಸ್ಥಳೀಯ ಆಡಳಿತ ನೋಟಿಸ್ ಜಾರಿ ಮಾಡಿದೆ.

ಬಂಗಲೆ ನಿರ್ಮಾಣ ಹಾಗೂ ಒತ್ತುವರಿ ಕುರಿತಂತೆ ವಿವರಣೆ ನೀಡುವಂತೆ ಕೊಡೈಕೆನಾಲ್ (Kodaikanal) ಉಪವಲಯ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ರಾಜ್ ಹಾಗೂ ಬಾಬಿ ಸಿಂಹ ಅವರಿಗೆ ನೋಟಿಸ್ ನೀಡಿದ್ದಾರೆ. ಪ್ರಕಾಶ್ ರಾಜ್ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆಯದೇ ಭಾರತೀಪುರಂ ಅಣ್ಣಾನಗರ ಗ್ರಾಮದಲ್ಲಿ ಬಂಗಲೆ ನಿರ್ಮಿಸಿದ್ದಾರೆ ಎನ್ನಲಾಗಿದೆ.

ಪೇತುಪರೈನಲ್ಲಿರುವ ಜಾಗದಲ್ಲಿ ಬಾಬಿ ಅವರು ಬಂಗಲೆ ನಿರ್ಮಿಸಿಕೊಂಡಿದ್ದಾರೆ. ಆದರೆ 2,500 ಚದರ ಅಡಿಯಲ್ಲಿ ಬಂಗಲೆ ನಿರ್ಮಾಣಕ್ಕೆ ಅನುಮತಿ ಪಡೆದಿದ್ದ ಅವರು 4,000 ಚದರ ಅಡಿ ಪ್ರದೇಶದಲ್ಲಿ ಬಂಗಲೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ನಟರೂ ಸಾರ್ವಜನಿಕ ರಸ್ತೆಗಳನ್ನು ಅತಿಕ್ರಮಿಸಿ ತಮ್ಮ ಬಂಗಲೆಗಳಿಗೆ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ಬಳಿಕ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Loading

Leave a Reply

Your email address will not be published. Required fields are marked *