ಬೆಂಗಳೂರು: ಕದ್ದು ಮುಚ್ಚಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿದ್ದಾರೆ ಎಂದು ಮಾಜಿ ಸಚಿವ ಆರ್.ಅಶೋಕ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾವೇರಿ ರಕ್ಷಣೆ ಮಾಡುತ್ತೇವೆ ಎಂಬ ನೆಪ ಇಟ್ಟುಕೊಂಡು ಮೈತ್ರಿ ಪಕ್ಷಕ್ಕೆ ಲಾಭ ಮಾಡಲು ನೀರು ಬಿಡುತ್ತಿದ್ದಾರೆ. ನೇರವಾಗಿ ತಮಿಳುನಾಡಿಗೆ ನೀರು ಹೋಗಲು ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಹೈಕಮಾಂಡ್ ಸಂತೋಷ ಪಡಿಸಲು ನೀರು ಬಿಡುತ್ತಿದ್ದಾರೆ. ತಮಿಳುನಾಡಿಗೆ ಅನುಕೂಲ ಮಾಡಿದ್ದಾರೆ. ಮೇಕೆದಾಟು ವಿಚಾರದಲ್ಲಿ ಹೋರಾಟ ಮಾಡಿದ್ದರು ಎಂದರು. ಸರ್ವಪಕ್ಷ ಸಭೆಗೆ ಗೈರು ಆಗುವ ಬಗ್ಗೆ ನಿರ್ಧಾರ ಆಗಿಲ್ಲ. ಆದರೆ ಸರ್ಕಾರದ ನಡೆ ವಿರೋಧ ಮಾಡುತ್ತೇವೆ ಎಂದರು.